Breaking
Tue. Jul 16th, 2024

ಜಿಯೋ ಗ್ರಾಹಕರಿಗೆ ಶಾಕ್‌ – ಜು.3ರಿಂದ ಮೊಬೈಲ್‌ ಸೇವಾ ದರದಲ್ಲಿ ಏರಿಕೆ

By Mooka Nayaka News Jun 28, 2024
Spread the love

ನವದೆಹಲಿ: ಜಿಯೋ ಟೆಲಿಕಾಂ ಸಂಸ್ಥೆ ತನ್ನ ಮೊಬೈಲ್‌ ಸೇವೆಗಳ ಮೇಲಿನ ದರವನ್ನು ಶೇ.12ರಿಂದ ಶೇ.27 ರಷ್ಟು ಏರಿಕೆ ಮಾಡಿದೆ ಎಂದು ಸಂಸ್ಥೆ ಅಧ್ಯಕ್ಷ ಆಕಾಶ್‌ ಅಂಬಾನಿ ತಿಳಿಸಿದ್ದಾರೆ.ಜಿಯೋನ ಎಲ್ಲ ಪ್ಲ್ಯಾನ್‌ನ ದರಗಳನ್ನು ಏರಿಸಲಾಗಿದೆ. ಜು.3ರಿಂದ ಪರಿಷ್ಕೃತ ದರ ಅನ್ವಯವಾಲಿದೆ.

ಒಂದು ತಿಂಗಳ 155 ರೂ. ಪ್ಲ್ಯಾನ್‌ ನ ಬೆಲೆ 189 ರೂ.ಗೆ ಏರಿಕೆಯಾಗಿದೆ. ಎರಡು ತಿಂಗಳ 470 ರೂ. ಪ್ಲ್ಯಾನ್‌ ಅನ್ನು 579 ರೂ.ಗೆ ಹೆಚ್ಚಳ ಮಾಡಲಾಗಿದೆ. 3 ತಿಂಗಳ 395 ರೂ. ಪ್ಲ್ಯಾನ್‌ ಅನ್ನು 479 ರೂ.ಗೆ ಏರಿಕೆಯಾಗಿದೆ.

ಅದರಂತೆ 1 ಜಿಬಿ ಡೇಟಾ 15ರೂ.ನಿಂದ 19ರೂ.ಗೆ ಏರಿಸಲಾಗಿದೆ. 399ರೂ.ನ 75 ಜಿಬಿ ಪೋಸ್ಟ್‌ ಪೇಯ್ಡ ಪ್ಲ್ಯಾನ್‌ ಬೆಲೆ 449 ರೂ.ಗೆ, 666 ರೂ.ನ 84 ದಿನಗಳ ಅನ್‌ಲಿಮಿಟೆಡ್‌ ಪ್ಲ್ಯಾನ್‌ 799ರೂ.ಗೆ, ವಾರ್ಷಿಕ ರಿಚಾರ್ಜ್‌ ದರ 1,559ರೂ. ನಿಂದ 1,899ರೂ. 2,999ರೂ.ನಿಂದ 3,599ರೂ.ಗೆ ಏರಿಸಲಾಗಿದೆ.

Related Post