Trending

ಭದ್ರಾವತಿ ಎಮ್ಮಿಹಟ್ಟಿ ದುರಂತ ವಿಧಿಯಾಟಕ್ಕೆ ಬಲಿಯಾಯ್ತು ಐಎಎಸ್ ಕನಸು; ಅಂಧರ ಫುಟ್ ಬಾಲ್ ಕ್ಯಾಪ್ಟನ್ ದುರ್ಮರಣ

Spread the love

ಶಿವಮೊಗ್ಗ: ಹಾವೇರಿ ಜಿಲ್ಲೆಯ ಬ್ಯಾಡಗಿ ಬಳಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ 13 ಮಂದಿ ಶಿವಮೊಗ್ಗ ಜಿಲ್ಲೆಯ ಎಮ್ಮಿಹಟ್ಟಿ ಗ್ರಾಮದವರಾಗಿದ್ದು, ಗ್ರಾಮದಲ್ಲೀಗ ನೀರವ ಮೌನ ಆವರಿಸಿದೆ. ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡೇನಹಳ್ಳಿ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಹಿಂದಿನಿಂದ ಟಿಟಿ ವಾಹನ ಡಿಕ್ಕಿ ಹೊಡೆದಿತ್ತು.

ಅಪಘಾತದಲ್ಲಿ ಭಾರತ ತಂಡದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್ 24 ವರ್ಷದ ಮಾನಸ ಕೂಡಾ ಮೃತಪಟ್ಟಿದ್ದಾರೆ. ಐಎಎಸ್ ಕನಸು ಕಂಡಿದ್ದ ಮಾನಸ, ಅಂಧತ್ವಕ್ಕೆ ಸೆಡ್ಡು ಹೊಡೆದು ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಭಾರತ ತಂಡದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್ ಆಗಿದ್ದ ಮಾನಸ, ಬೆಂಗಳೂರಿನಲ್ಲಿ ಐಎಎಸ್ ಗಾಗಿ ಓದುತ್ತಿದ್ದರು. ದೇವಸ್ಥಾನಕ್ಕೆಂದು ತೆರಳಲು ಭಾನುವಾರ ಗ್ರಾಮಕ್ಕೆ ಆಗಮಿಸಿದ್ದರು.

ಆದರೆ ವಿಧಿಯ ಆಟ ಬೇರೆಯಿತ್ತು. ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಭದ್ರಾವತಿಗೆ ಮರಳಿ ಹೋಗುತ್ತಿದ್ದಾಗ ಮುಂಜಾನೆ 3.30ರ ಸುಮಾರಿಗೆ ಭೀಕರ ಆಪಘಾತದಲ್ಲಿ ಮಾನಸ ಕೊನೆಯುಸಿರೆಳಿದಿದ್ದಾರೆ. ಅಪಘಾತದ ಸುದ್ದಿ ಕೇಳಿ ಇಡೀ ಗ್ರಾಮವೇ ಕಣ್ಣೀರಿಡುತ್ತಿದೆ.

[pj-news-ticker]