Breaking
Tue. Feb 27th, 2024

ಸಾವಿನ ಪ್ರಾಂಕ್ ಮಾಡಿದ್ದ ಪೂನಂಪಾಂಡೆಗೆ ಮತ್ತೊಂದು ಸಂಕಷ್ಟ: 100 ಕೋಟಿ ರೂ ಮಾನನಷ್ಟ ಮೊಕದ್ದಮೆ ದಾಖಲು

By Mooka Nayaka News Feb 12, 2024
Spread the love

ಮುಂಬೈ: ಗರ್ಭಕಂಠದ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಸಲುವಾಗಿ ಸಾವಿನ ಪ್ರಾಂಕ್ ಮಾಡಿದ್ದೆ ಎಂದು ಹೇಳಿದ್ದ ಪೂನಂಪಾಂಡೆಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ವ್ಯಕ್ತಿಯೊಬ್ಬರು ಆಕೆ ವಿರುದ್ಧ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ವಿವಾದಿತ ನಟಿ ಕಮ್ ಮಾಡೆಲ್ ಪೂನಂ ಪಾಂಡೆ ಇತ್ತೀಚೆಗೆ ಸಾವಿನ ನಾಟಕವಾಡಿ ಭಾರಿ ಸದ್ದು ಮಾಡಿದ್ದಳು. ಗರ್ಭಕಂಠ ಕ್ಯಾನ್ಸರ್‌ನಿಂದ ಪೂನಂ ಪಾಂಡೆ ಮೃತಪಟ್ಟಿದ್ದಾಳೆ ಅನ್ನೋ ಸುದ್ದಿ ಕೋಲಾಹಲವನ್ನೇ ಸಷ್ಟಿಸಿತ್ತು. ದೇಶಾದ್ಯಂತ ಪೂನಂ ಪಾಂಡೆ ಸಾವಿನ ಸುದ್ದಿ ಸಂಚಲನ ಸೃಷ್ಟಿಸಿದ್ದ ಬೆನ್ನಲ್ಲೇ ತಾನು ಸತ್ತಿಲ್ಲ, ಗರ್ಭಕಂಠ ಕ್ಯಾನ್ಸರ್ ಕುರಿತ ಜಾಗೃತಿ ಮೂಡಿಸಲು ಸಾವಿನ ನಾಟಕ ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಳು.

ಆದರೆ ಪೂನಂ ಪಾಂಡೆ ಅತಿರೇಕದ ಜಾಗೃತಿ ಆಕ್ರೋಶಕ್ಕೆ ಕಾರಣವಾಗಿತ್ತು. ಪೂನಂ ವಿರುದ್ಧ ದೂರು ಕೂಡ ದಾಖಲಾಗಿದ್ದು, ಇದೀಗ ಪೂನಂ ಪಾಂಡೆ ಹಾಗೂ ಪೂನಂ ಪತಿ ವಿರುದ್ದ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.

ಫೈಜನ್ ಅನ್ಸಾರಿ ಅನ್ನೋ  ವ್ಯಕ್ತಿ ಕಾನ್ಪುರ ಪೊಲೀಸ್ ಕಮಿಷನರ್ ಬಳಿ ಪೂನಂ ಪಾಂಡೆ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದು, ಪೂನಂ ಪಾಂಡೆ ಹಾಗೂ ಪತಿ ವಿರುದ್ಧ ಕಾನ್ಪುರ ಕೋರ್ಟ್ ಅರೆಸ್ಟ್ ವಾರೆಂಟ್  ಹೊರಡಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ. ಪೂನಂ ಪಾಂಡೆ ಹಾಗೂ ಆಕೆಯ ಪತಿ ಜಾಗೃತಿ ಹೆಸರಿನಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡಿದ್ದಾಳೆ. ಪೂನಂ ಪಾಂಡೆಯ ನಡೆಯಿಂದ ದೇಶದ ಸೆಲೆಬ್ರೆಟಿಗಳು, ಮಾಡೆಲ್, ಬಾಲಿವುಡ್ ಮೇಲಿನ ನಂಬಿಕೆ ಕಳೆದುಕೊಳ್ಳುವಂತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Related Post

Leave a Reply

Your email address will not be published. Required fields are marked *