Breaking
Mon. Jun 17th, 2024

ದಲಿತ ಮಹಿಳೆಯರಿಗೆ ತೆಂಗಿನ ಚಿಪ್ಪಿನಲ್ಲಿ ಚಹಾ: ತಮಿಳುನಾಡಿನಲ್ಲಿ ಅತ್ತೆ-ಸೊಸೆ ಬಂಧನ

By Mooka Nayaka News Feb 11, 2024
Spread the love

ಧರ್ಮಾಪುರಿ: ದಲಿತ ಮಹಿಳೆಯರಿಗೆ ತೆಂಗಿನ ಕಾಯಿ ಚಿಪ್ಪಿನಲ್ಲಿ ಚಹಾ ನೀಡುವ ಮೂಲಕ ತಾರತಮ್ಯ ಎಸಗಿದ ಆರೋಪದಲ್ಲಿ ತಮಿಳುನಾಡಿನ ಧರ್ಮಪುರಿಯಲ್ಲಿ ಗೌಂಡರ್ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ದೌರ್ಜನ್ಯ ತಡೆ) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ಮಾರಪ್ಪನಾಯ್ಕನಪಟ್ಟಿ ನಿವಾಸಿಗಳಾದ ಚಿನ್ನತಾಯಿ (60) ಮತ್ತು ಆಕೆಯ ಸೊಸೆ ಬಿ ಧರಣಿ (32) ಬಂಧಿತರು. ಕಂಬೈನಲ್ಲೂರು ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

ಪೊಲಂಪಾಳ್ಯಂ ಮೂಲದ 50 ವರ್ಷದ ದಲಿತ ಮಹಿಳೆ ಜಿ ಸೆಲ್ಲಿ ನೀಡಿದ ದೂರಿನ ಅನ್ವಯ ಅತ್ತೆ ಸೊಸೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಲ್ಲಿ ಅವರು ಅವರು ಪೊಲಂಪಾಳ್ಯಂ ನಿವಾಸಿಗಳಾದ ಆರ್ ಶ್ರೀಪ್ರಿಯಾ (38), ವಿ ವೀರಮ್ಮಾಳ್ (55) ಮತ್ತು ಕೆ ಮಾರಿಯಮ್ಮಾಳ್ (60) ಜತೆ ಚಿನ್ನತಾಯಿ ಕುಟುಂಬದ ಕೃಷಿ ಭೂಮಿಯಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಚಿನ್ನತಾಯಿ ಮತ್ತು ಧರಣಿ ವಿರುದ್ಧ ಎಸ್‌ಸಿ ಎಸ್‌ಟಿ ಕಾಯ್ದೆ, 2015ರ ಸೆಕ್ಷನ್ 3 (1) (r) ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Post