Trending

Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ

Spread the love

278 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಮುಳುಗಿ ಕನಿಷ್ಠ 78 ಜನರು ನೀರು ಪಾಲಾಗಿರುವ ಅವಘಡ ಆಫ್ರಿಕನ್ ರಾಷ್ಟ್ರ ಪೂರ್ವ ಕಾಂಗೋದ ಕಿವು ಸರೋವರದಲ್ಲಿ ಗುರುವಾರ ನಡೆದಿದೆ.

ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಘಟನೆಯು ಗೋವಾ ಕಡಲ ತೀರದಲ್ಲಿ ನಡೆದಿದೆ ಎಂದು ಹೇಳಿಕೊಳ್ಳಲಾಗಿದೆ. ಅನೇಕರು ಅದನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಾಮರ್ಥ್ಯ ಮೀರಿದ ಜನರನ್ನು ತುಂಬಿದ್ದ ಹಡಗು ಶಾಂತ ನೀರಿನಲ್ಲಿ ಮುಳುಗುವುದನ್ನು ವಿಡಿಯೋ ದಲ್ಲಿ ಕಾಣಬಹುದಾಗಿದೆ.

ಇನ್ನೂ ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಮತ್ತು ಪ್ರಾದೇಶಿಕ ಅಧಿಕಾರಿಗಳು ವ್ಯತಿರಿಕ್ತ ಸಾವಿನ ಸಂಖ್ಯೆಯನ್ನು ನೀಡುತ್ತಿದ್ದಾರೆ. ದಕ್ಷಿಣ ಕಿವು ಪ್ರಾಂತ್ಯದ ಗವರ್ನರ್, ಸಾವಿನ ಸಂಖ್ಯೆ 78 ಮತ್ತು 278 ಜನರು ಬೋಟ್ ನಲ್ಲಿದ್ದರು ಎಂದು ಹೇಳಿದ್ದಾರೆ.

[pj-news-ticker]