Breaking
Mon. Jun 17th, 2024

ಸಾಗರ: ನಡು ರಸ್ತೆಯಲ್ಲಿ ಗನ್ ಹಿಡಿದು ಯುವಕನ ಹುಚ್ಚಾಟ; ಥಳಿಸಿದ ಯುವಕರು

By Mooka Nayaka News Feb 12, 2024
Spread the love

ಶಿವಮೊಗ್ಗ: ಯುವಕನೋರ್ವ ಪಾನಮತ್ತನಾಗಿ ನಡು ರಸ್ತೆಯಲ್ಲಿ ಗನ್ ಹಿಡಿದು ಹುಚ್ಚಾಟ ಮೆರೆದ ಘಟನೆ ಸಾಗರ ಮಾರ್ಕೆಟ್ ರಸ್ತೆ ಹಿಂಭಾಗದಲ್ಲಿ ನಡೆದಿದೆ.

ನಕಲಿ ಗನ್ ಹಿಡಿದು ಯುವಕ ಪಾನಮತ್ತನಾಗಿ ನಡು ರಸ್ತೆಯಲ್ಲಿ ಶೂಟ್ ಮಾಡುತ್ತೇನೆ ಎಂದು ಸ್ಥಳೀಯರಿಗೆ ಧಮ್ಕಿ ಹಾಕಿದ್ದಾನೆ. ಗನ್ ನೋಡಿ ಕೆಲಕಾಲ ಜನರು ಭಯಭೀತರಾಗಿದ್ದಾರೆ.ಅವಾಜ್ ಹಾಕಿದ ಯುವಕನಿಗೆ ಸ್ಥಳೀಯ ಯುವಕರು ಥಳಿಸಿದ್ದಾರೆ. ಪ್ರಕರಣ ಸಂಬಂಧ ಸಾಗರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

Related Post