Trending

ತೀರ್ಥಹಳ್ಳಿ : ಅಪಘಾತ – ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವು

Spread the love

ಶಿವಮೊಗ್ಗ: ನಗರದ ಹೊರವಲಯದ ತೀರ್ಥಹಳ್ಳಿ ರಸ್ತೆಯ ಹರಕೆರೆ ಸಮೀಪದ ಕಾನೇಹಳ್ಳದ ಬಳಿ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಮರ ಹಾಗೂ ಜಾಹಿರಾತು ಫಲಕ ಅಳವಡಿಸಿದ್ದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟ ಪ್ರಕರಣ ಇಂದು ನಡೆದಿದೆ.

ಇಲ್ಲಿನ ಆರ್ ಎಂಎಲ್ ನಗರದ ನಿಸಾರ್ (18) ಹಾಗೂ ಮಂಜುನಾಥ ಬಡಾವಣೆಯ ಯಶವಂತ್ (20) ಅಪಘಾತದಲ್ಲಿ ಮೃತಪಟ್ಟವರು.

ಕೆಟಿಎಂ ಬೈಕ್‌ ನಲ್ಲಿ ತೀರ್ಥಹಳ್ಳಿ ಮಾರ್ಗವಾಗಿ ಗಾಜನೂರು ಐಟಿಐ ಕಾಲೇಜಿಗೆ ಯುವಕರು ತೆರಳುತ್ತಿದ್ದರು. ಈ ವೇಳೆ ಅತಿಯಾದ ವೇಗದಿಂದ ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[pj-news-ticker]