Breaking
Mon. Oct 14th, 2024

ಪ್ರಧಾನಿ ಮೋದಿಯವರ ಫೋಟೋ ಬಳಸದೆ ಮಗನ ಪರ ಪ್ರಚಾರ ಮಾಡುವಂತೆ ಯಡಿಯೂರಪ್ಪಗೆ ಸವಾಲು ಹಾಕುತ್ತೇನೆ: ಈಶ್ವರಪ್ಪ

By Mooka Nayaka News Apr 11, 2024
Spread the love

ಶಿವಮೊಗ್ಗ: ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ  ಮಾತಾಡಿದ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ನಾಳೆ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.

ತಮ್ಮ ಬೆಂಬಲಿಗರು ಮತ್ತು ತನ್ನಂತೆ ಹಿಂದೂತ್ವವನ್ನು ಪ್ರತಿಪಾದಿಸುವವರೇ ತಮ್ಮ ಸ್ಟಾರ್ ಪ್ರಚಾರಕರು ಎಂದು ಹೇಳಿದ ಅವರು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮತ್ತು ರಾಜ್ಯ ಮಡಿವಾಳ ಸಮಾಜದ ಅಧ್ಯಕ್ಷ ತಮ್ಮೊಂದಿಗಿದ್ದು ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಬಳಸಬಾರದು ಎಂದು ಬಿಜೆಪಿ ನಾಯಕರು ಹೇಳುತ್ತಿರುವುದನ್ನು ಪತ್ರಕರ್ತರು ಅವರ ಗಮನಕ್ಕೆ ತಂದಾಗ ವ್ಯಗ್ರರಾದ ಈಶ್ವರಪ್ಪ, ಮೋದಿ ಫೋಟೋ ಬಳಸದಂತೆ ತಡೆಯಲು ಅವರು ಯಾರು? ಅವರೊಬ್ಬ ವಿಶ್ವನಾಯಕ ಮತ್ತು ಅವರನ್ನು ಹೃದಯದಲ್ಲಿಟ್ಟುಕೊಂಡಿದ್ದೇನೆ, ತನ್ನನ್ನು ಯಾರೂ ತಡೆಯಲಾರರು ಎಂದು ಹೇಳಿದರು,

ಯಡಿಯೂರಪ್ಪನವರು ಮೋದಿ ಫೋಟೋ ಬಳಸದೆ ಶಿವಮೊಗ್ಗದಲ್ಲಿ ತಮ್ಮ ಮಗನನ್ನು ಗೆಲ್ಲಿಸುತ್ತಾರೆಯೇ? ಎಡಭಾಗದಲ್ಲಿ ವಿಜಯೇಂದ್ರ, ಬಲಭಾಗದಲ್ಲಿ ರಾಘವೇಂದ್ರ ಮತ್ತು ನಡುವೆ ತಾವಿರುವ ಫೋಟೋ ಬಳಸಿ ಚುನಾವಣಾ ಪ್ರಚಾರ ನಡೆಸುವಂತೆ ಈಶ್ವರಪ್ಪ ಮಾಜಿ ಮುಖ್ಯಮಂತ್ರಿಗೆ ಸವಾಲು ಎಸೆದರು.

Related Post