Breaking
Sat. Apr 20th, 2024

ಖಾಸಗಿ ಶಾಲೆಯಲ್ಲಿ ನಾಡಗೀತೆ ಕಡ್ಡಾಯವಲ್ಲ ಎಂಬ ವಿಚಾರಕ್ಕೆ ಶಿಕ್ಷಣ ಸಚಿವರು ಹೇಳಿದ್ದೇನು?

By Mooka Nayaka News Feb 21, 2024
Spread the love

ಶಿವಮೊಗ್ಗ: ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಅಲ್ಲ ಎನ್ನುವ ವಿಚಾರಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು ಎಲ್ಲಾ ಶಾಲೆಯಲ್ಲಿ ಸಂವಿಧಾನ ಪೀಠಿಕೆ ಕಡ್ಡಾಯ ಮಾಡುತ್ತೇವೆ, ಕನ್ನಡ ಸಂಸ್ಕೃತಿ ಇಲಾಖೆ ಯಾಕೇ ಈ ನಿರ್ಧಾರ ತಗೆದುಕೊಂಡಿದೆ ಎಂಬುದಕ್ಕೆ ಅವರು ಉತ್ತರ ಕೊಡಬೇಕಾಗುತ್ತೆ ಎಂದು ಹೇಳಿದರು.

ಶಾಲೆಗಳಲ್ಲಿ ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ಹೇಳಿದರೆ ಒಳ್ಳೆಯದು, ಕುವೆಂಪು ಅವರಿಗೆ ಜಾತ್ಯತೀತವಾಗಿ, ಪಕ್ಷಾತೀತವಾಗಿ ಒಂದು ಭಾವನಾತ್ಮಕ ನೆಚರ್ ಕನೆಕ್ಟಿವಿಟಿ ಇದೆ ಹಾಗಾಗಿ ನಾಡಗೀತೆ ಇದ್ರೆ ಒಳ್ಳೆಯದು ಚೆರ್ಚೆ ಮಾಡಿ ಹೇಳುತ್ತೇನೆ ಎಂದ ಅವರು ನಾಡಗೀತೆ ಕಡ್ಡಾಯವಲ್ಲ ಎಂದು ಮಾಡಿದ್ದರೆ ನಾನು ಮಾರ್ಪಾಡು ಮಾಡಿಸುತ್ತೇನೆ. ಯಾವುದಾದರೂ ಕಾರಣದಿಂದ ಹೀಗೆ ಮಾಡಿರುತ್ತಾರೆ. ನಾನು ನಮ್ಮ ಇಲಾಖೆಯಲ್ಲಿ ನಾಡಗೀತೆ ಕಡ್ಡಾಯ ಅಂತ ಮಾಡಿಸುತ್ತೇನೆ ಎಂದು ಹೇಳಿದರು.

Related Post