Breaking
Sun. Sep 8th, 2024

ಕೆಂಪಣ್ಣ ಆಯೋಗ ವರದಿ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಲಿ: ಕುಮಾರಸ್ವಾಮಿ

By Mooka Nayaka News Sep 5, 2024
Spread the love

ಶಿವಮೊಗ್ಗ: ಕೋವಿಡ್ ಖರೀದಿ ವರದಿಯಲ್ಲಿ ಏನಿದೆ ಗೊತ್ತಿಲ್ಲ. ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ಇಂದು ಚರ್ಚೆ ನಡೆಯುತ್ತಿದೆ ಎಂಬ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ. ಕೆಂಪಣ್ಣ ಆಯೋಗ ವರದಿ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಲಿ. ಅದನ್ನು ಏಕೆ ಕ್ಯಾಬಿನೆಟ್ ಮುಂದೆ ತರದೆ ಬಿಟ್ಟಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಆಯುಕ್ತ ದಿನೇಶ್ ಕುಮಾರ್ ಅಮಾನತು ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಮಾಧ್ಯಮದವರಿಗೆ ಎಲ್ಲಾ ಗೊತ್ತಿದೆ. ಮಾಧ್ಯಮದವರೇ ಎಲ್ಲಾ ಹೇಳುತ್ತಿದ್ದಾರೆ. ಈಗಾಗಲೇ ಹೈಕೋರ್ಟ್ ನಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದವಾಗಿದೆ. ಸಿದ್ದರಾಮಯ್ಯ ಅವರ ಪರ ವಕೀಲರು ವಾದ ಮಾಡಲು ಇನ್ನೂ ಸಮಯ ಕೇಳುತ್ತಿದ್ದಾರೆ ಎಂದರು

ವಿಐಎಸ್ಎಲ್ ನಿರ್ವಹಣೆಗೆ 10-15 ಸಾವಿರ ಕೋಟಿ ಬೇಕು. ವಿಐಎಸ್ಎಲ್ ಹಾಗು ವೈಜಾಕ್ ಬಗ್ಗೆ ನಮಗೆ ಬದ್ಧತೆಯಿದೆ. ಆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಯುತ್ತಿದೆ. 10-15 ಸಾವಿರ ಕೋಟಿ ಬೇಕಾಗಿರುವುದರಿಂದ ಸಮಯ ಹಿಡಿಯುತ್ತದೆ ಎಂದರು.

ಕನ್ನಡ ಚಿತ್ರರಂಗದಲ್ಲಿ ಮೀಟೂ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಈ ಬಗ್ಗೆ ನನಗೆ ಗೊತ್ತಿಲ್ಲ ನಾನು ಮಾತನಾಡಲ್ಲ ಎಂದರು.

Related Post