Trending

ಗಾಂಜಾ ಸಾಗಾಟ; ತೀರ್ಥಹಳ್ಳಿಯಲ್ಲಿ ಇಬ್ಬರ ಬಂಧನ; 2 ಕೆಜಿ ಗಾಂಜಾ ವಶ

Spread the love

ತೀರ್ಥಹಳ್ಳಿ: ಓಮಿನಿ ಕಾರಿನಲ್ಲಿ ಗಾಂಜಾ ಸೊಪ್ಪನ್ನು ಮಾರಾಟ ಮಾಡಲು ಸಾಗರ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಬರುತ್ತಿದ್ದವರನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಸಾಗಿಸುತ್ತಿದ್ದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಹಾಗೂ ಅಪಾರ ಪ್ರಮಾಣದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳಾದ ಮಹಮ್ಮದ್ ಬೇಗ್ (38) ಆಚಾಪುರ, ಆನಂದಪುರ, ಸಾಗರ ತಾ, ಮತ್ತು ಹೊಸನಗರದ ಕೆಂಚನಾಳ ಗ್ರಾಮದ ಗಜೇಂದ್ರ ಆಲಿಯಾಸ್‌ ಗಜ (37) ವರ್ಷ ಇಬ್ಬರನ್ನ ದಸ್ತಗಿರಿ ಮಾಡಲಾಗಿದೆ.  ಇವರಿಂದ 1 ಲಕ್ಷದ 60 ಸಾವಿರ ರೂ. ಮೌಲ್ಯದ 2 ಕೆಜಿ 150 ಗ್ರಾಂ ತೂಕದ ಒಣ ಗಾಂಜಾ ಮತ್ತು 2 ಲಕ್ಷ 50 ಸಾವಿರ ಸೂ.  ಅಂದಾಜು ಮೌಲ್ಯ 2,50,000 ರೂ ಗಳ ಓಮಿನಿ ಕಾರನ್ನು ಸೀಜ್ ಮಾಡಲಾಗಿದೆ.

ಎಸ್ಪಿ ಮಿಥುನ್ ಕುಮಾರ್ ಜಿ.ಕೆ, ಅಡಿಷನಲ್ ಎಸ್ಪಿ ಅನಿಲ್ ಕುಮಾರ ಭೂಮರೆಡ್ಡಿ, ಎ. ಜಿ ಕಾರಿಯಪ್ಪರ ಮಾರ್ಗದರ್ಶನದಲ್ಲಿ, ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರರ ನೇತೃತ್ವದಲ್ಲಿ ತೀರ್ಥಹಳ್ಳಿ ಠಾಣೆಯ ಪಿಐ ಅಶ್ವತ್ ಗೌಡ ಜೆ, ಪಿಎಸ್ ಐ ಶಿವನಗೌಡ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ದಾಳಿ ನಡೆಸಿದೆ.‌

[pj-news-ticker]