Trending

ಸೊರಬ – ಹಾನಗಲ್ ಮಾರ್ಗದಲ್ಲಿ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಸಚಿವ ಮಧು ಬಂಗಾರಪ್ಪ ಚಾಲನೆ

Spread the love

ಸೊರಬ: ಸೊರಬ – ಹಾನಗಲ್ ನೂತನ ಮಾರ್ಗದ ಬಸ್ ಸಂಚಾರಕ್ಕೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಚಾಲನೆ ನೀಡಿದರು. ಈ ಮೂಲಕ ಗ್ರಾಮೀಣ ಜನತೆಗೆ ಸಾರಿಗೆ ಬಸ್ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

ಇಂದು ಸೊರಬ ವಿಧಾನ ಸಭಾ ಕ್ಷೇತ್ರದ ಸೊರಬದಲ್ಲಿ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಅಶ್ವಮೇಧ ಬಸ್ ಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ಬಸ್ ಸಾಗರ – ಸೊರಬ – ಜಡೆ ಮಾರ್ಗವಾಗಿ ಹಾನಗಲ್ ತಲುಪಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದ್ದಾರೆ.

[pj-news-ticker]