ಶಿವಮೊಗ್ಗ: ಲಾಂಗು, ಮಚ್ಚು ಹಿಡಿದು ಅಪ್ರಾಪ್ತ ವಯಸ್ಕ ಆರು ಮಂದಿ ಮಾಡಿದ ರೀಲ್ಸ್ ವೈರಲ್ ಆದ ಬೆನ್ನಲ್ಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಐವರು ಹುಡುಗರು ಸಾರ್ವಜನಿಕ ಸ್ಥಳದಲ್ಲಿ ನಿಂತು ಕೈಯಲ್ಲಿ ಲಾಂಗ್ ಮಚ್ಚು ಹಿಡಿದು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದರು. ಸಾರ್ವಜನಿಕ ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟು ಮಾಡುವಂತೆ ವರ್ತಿಸಿದ ಕಾರಣ, ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡು ಶಾಕ್ ನೀಡಿದ್ದಾರೆ.
ದರ್ಶನ್, ರಾಕೇಶ್, ರಾಹುಲ್, ಸತೀಶ್, ಚೇತನ್ ಮತ್ತು ಇನ್ನೊಬ್ಬನ ಮೇಲೆ ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದ್ದಾರೆ.
ತುಂಗಾ ನಗರ ಪೊಲೀಸರು ಸುಮೊಟೊ ಪ್ರಕರಣ ದಾಖಲು ಮಾಡಿದ್ದಾರೆ.