ಸೊರಬ: ಸೊರಬ – ಹಾನಗಲ್ ನೂತನ ಮಾರ್ಗದ ಬಸ್ ಸಂಚಾರಕ್ಕೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಚಾಲನೆ ನೀಡಿದರು. ಈ ಮೂಲಕ ಗ್ರಾಮೀಣ ಜನತೆಗೆ ಸಾರಿಗೆ ಬಸ್ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಇಂದು ಸೊರಬ ವಿಧಾನ ಸಭಾ ಕ್ಷೇತ್ರದ ಸೊರಬದಲ್ಲಿ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಅಶ್ವಮೇಧ ಬಸ್ ಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ಬಸ್ ಸಾಗರ – ಸೊರಬ – ಜಡೆ ಮಾರ್ಗವಾಗಿ ಹಾನಗಲ್ ತಲುಪಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದ್ದಾರೆ.
