ಬೆಂಗಳೂರು: ಜನಸಾಮಾನ್ಯರು ಹೊಸ ವರ್ಷಾಚರಣೆಯನ್ನು ಆಚರಿಸುವ ವಿಧಾನವೇ ಬೇರೆ ಮತ್ತು ಗಣ್ಯರು, ಸೆಲೆಬ್ರಿಟಿ ಹಾಗೂ ರಾಜಕಾರಣಿಗಳು ಆಚರಿಸುವ ರೀತಿ ಬೇರೆ. ಉಳ್ಳವರು ಹಣವನ್ನು ನೀರಿನತೆ ಚೆಲ್ಲಿ ತಮಗಿಷ್ಟವಾಗುವ ರೀತಿಯಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ.
ವಿಷಯವೇನೆಂದರೆ, ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನ್ಯೂ ಈಯರ್ ಸೆಲೆಬ್ರೇಷನ್ಗಾಗಿ ಕುಟುಂಬ ಸಮೇತ ಟರ್ಕಿ ಮತ್ತು ಕೆನಡಾ ತೆರಳಿದ್ದಾರೆ. ಹಾಗೆಯೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕುಟುಂಬದ ಜೊತೆ ವಿದೇಶಕ್ಕೆ ತೆರಳಿದ್ದು ಅಲ್ಲೇ ಹೊಸ ವರ್ಷವನ್ನು ಸ್ವಾಗತಿಸಲಿದ್ದಾರೆ.
ರಾಜ್ಯದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಮತ್ತು ಈಗ ಕೇಂದ್ರದಲ್ಲಿ ಸಚಿವರಾಗಿರುವ ಹೆಚ್ ಡಿ ಕುಮಾರಸ್ವಾಮಿ ತಮ್ಮ ಕುಟುಂಬದ ಜೊತೆ ಗೋವಾದಲ್ಲಿ ಹೊಸವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
