Spread the love

ಬೆಂಗಳೂರು: ರಾಜ್ಯ ಸರ್ಕಾರ ತನ್ನ ನಾಲ್ಕು ಸಾರಿಗೆ ನಿಗಮಗಳಲ್ಲಿ 6,500 ಚಾಲಕ ಮತ್ತು 300 ತಾಂತ್ರಿಕ ಸಿಬ್ಬಂದಿ ನೇಮಿಸಿಕೊಳ್ಳಲು ಶನಿವಾರ ಅನುಮೋದನೆ ನೀಡಿದೆ.

ಕಳೆದ ಎಂಟು ವರ್ಷಗಳಲ್ಲಿ ಯಾವುದೇ ನೇಮಕಾತಿ ನಡೆಯದ ಕಾರಣ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಯಲ್ಲಿ 13,669 ಖಾಲಿ ಹುದ್ದೆಗಳು ಇವೆ. ಈ ಅವಧಿಯಲ್ಲಿ ಅನೇಕ ಉದ್ಯೋಗಿಗಳು ನಿವೃತ್ತರಾದರು ಮತ್ತು ಹಲವರು ಉದ್ಯೋಗ ತ್ಯಜಿಸಿದ್ದಾರೆ.

ಒಟ್ಟು 13,000 ಡ್ರೈವಿಂಗ್ ಮತ್ತು ತಾಂತ್ರಿಕ ಸಿಬ್ಬಂದಿ ನೇಮಕಕ್ಕೆ ಅವಕಾಶ ನೀಡುವಂತೆ ರಾಜ್ಯದ ನಿಗಮಗಳು ಸರ್ಕಾರಕ್ಕೆ ಮನವಿ ಮಾಡಿದ್ದರೂ, ಮೊದಲ ಹಂತದಲ್ಲಿ 6,800 ನೌಕರರ ನೇಮಕಾತಿಗೆ ಮಾತ್ರ ಅನುಮೋದನೆ ನೀಡಲಾಗಿದೆ.

ಕೆಕೆಆರ್‌ಟಿಸಿಗೆ 1,619 ಚಾಲಕರು ಮತ್ತು 300 ಕಂಡಕ್ಟರ್‌ಗಳ ನೇಮಕಾತಿಗೆ ಅವಕಾಶ ನೀಡಲಾಗಿದೆ. ಇದರೊಂದಿಗೆ ರಾಜ್ಯವು ಒಟ್ಟಾರೆಯಾಗಿ 8,719 ಡ್ರೈವಿಂಗ್ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಪಡೆಯಲಿದೆ.

 

Leave a Reply

Your email address will not be published. Required fields are marked *