Breaking
Sat. Apr 20th, 2024

ಕಾಂತರಾಜ ಆಯೋಗದ ವರದಿ ವಿರೋಧಿಗಳನ್ನು ಚುನಾವಣೆಯಲ್ಲಿ ಸೋಲಿಸಲು ಕರೆ

By Mooka Nayaka News Mar 11, 2024
Spread the love

ಶಿವಮೊಗ್ಗ: ಕಾಂತರಾಜ ಆಯೋಗದ ವರದಿ ವಿರೋಧಿಗಳನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲು ಹಿಂದುಳಿದ ಜಾತಿ-ಜನಾಂಗಗಳ ಮತದಾರರು ಒಗ್ಗಟ್ಟಾಗಬೇಕೆಂದು ಹಿಂದುಳಿದ ಜನ ಜಾಗೃತಿ ವೇದಿಕೆ ಗೌರವ ಅಧ್ಯಕ್ಷ ಪ್ರೊ. ಹೆಚ್. ರಾಚಪ್ಪ ಕರೆ ನೀಡಿದರು.

ಇಂದು ಬೆಳಿಗ್ಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಮ್ಮಿಕೊಂಡಿದ್ದ ಕಾಂತರಾಜ ಆಯೋಗದ ವರದಿ ಜಾರಿಗಾಗಿ ಹಕ್ಕೊತ್ತಾಯ ಹಾಗು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ವಿರುದ್ಧ ಪ್ರತಿಭಟನಾ ಧರಣಿ ಕಾಯ೯ಕ್ರಮದಲ್ಲಿ ಅವರು ಮಾತನಾಡಿದರು.

ದೇಶ 1950ರಲ್ಲಿ ಸಂವಿಧಾನ ಅಂಗೀಕರಿಸಿದ ನಂತರ ಸುಮಾರು 74 ವಷ೯ಗಳ ಕಾಲ ಹಿಂದುಳಿದವರು ಮೀಸಲಾತಿ ಪಡೆದುಕೊಳ್ಳಲು ನಿರಂತರವಾಗಿ ನಡೆಸಿರುವ ಹೋರಾಟ ದಯಾನೀಯವಾದುದು, ಮೇಲ್ವಗ೯ಗಳ ದಬ್ಬಾಳಿಕೆಯಿಂದ ಇಂದಿಗೂ ಹಿಂದುಳಿದವರಿಗೆ ಮೀಸಲಾತಿ ಮರೀಚಿಕೆಯಾಗೇ ಉಳಿದಿದೆ ಎಂದು ಅವರು ಹೇಳಿದರು.

ಸುಮಾರು ಒಂದೂವರೆ ಲಕ್ಷ ಶಿಕ್ಷಕರು ಹಾಗು ಸಕಾ೯ರಿ ಸಿಬ್ಬಂದಿ ಮೂರು ವಷ೯ಗಳ ಕಾಲ ನಿಭಿ೯ಡೆಯಿಂದ ಮಾಹಿತಿ ಕಲೆ ಹಾಕಿದ ಹಿಂದುಳಿದವರ ಸಮೀಕ್ಷಾ ವರದಿಯನ್ನು ಕಸದ ಬುಟ್ಟಿಯಲ್ಲಿದ್ದ ವರದಿ ಎಂದು ಹಂಗಿಸಿದ ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನು ಪ್ರೊ. ಹೆಚ್. ರಾಚಪ್ಪ ತೀವ್ರವಾಗಿ ಖಂಡಿಸಿದರು.

ಕೇಂದ್ರದ ಬಿಜೆಪಿ ಸರ್ಕಾರ ಹಾಗು ರಾಜ್ಯದ ಕಾಂಗ್ರೆಸ್ ಸಕಾ೯ರಗಳು ಮೀಸಲಾತಿ ನೀಡುವಲ್ಲಿ ಹಿಂದುಳಿದ ಜಾತಿ-ವಗ೯ಗಳನ್ನು ನಿರಂತರವಾಗಿ ಶೋಷಿಸುತ್ತ ಬಂದಿದ್ದು ವಿನಾಕಾರಣ ವರದಿ ಅನುಷ್ಠಾನ ಮುಂದೂಡುತ್ತ ಕಾಲಹರಣ ಮಾಡುವ ಹುನ್ನಾರದಲ್ಲಿ ತೊಡಗಿವೆ ಎಂದು ಜನಜಾಗೃತಿ ವೇದಿಕೆ ಅಧ್ಯಕ್ಷ ತೀ.ನ. ಶ್ರೀನಿವಾಸ್ ಆರೋಪಿಸಿದರು.

ಸ್ವಾತಂತ್ರ್ಯದೊರೆತ ನಂತರ ಮೇಲ್ವಗ೯ಗಳ ಜನರು ಹಣ ಅಂತಸ್ತು ಅಧಿಕಾರಗಳನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಹಿಂದುಳಿದ ವರ್ಗಗಳ ಜನರನ್ನು ಶೋಷಿಸುತ್ತ ಬಂದಿದ್ದು ಅದೇ ಜಾಯಮಾನ ಮುಂದುವರಿದಿದೆ ಇದಕ್ಕೆ ಪ್ರತಿಯಾಗಿ ಹಿಂದುಳಿದವರು ಒಗ್ಗಟ್ಟಾಗದಿದ್ದರೆ ಶೋಷಣೆ ತಪ್ಪುವುದಿಲ್ಲ ಎಂದು ಅವರು ಎಚ್ಚರಿಸಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸೊರಬದ ರಾಜಪ್ಪ ಮಾಸ್ಟರ್, ಡಾ. ಕೆ.ಜಿ. ವೆಂಕಟೇಶ್, ಸಾಗರದ ಡಿ.ಎಸ್.ಎಸ್. ಮುಖಂಡ ದೂಗೂರು ಪರಮೇಶ್ವರ, ಸಿರಿವಂತೆ ಚಂದ್ರಶೇಖರ್, ಶಿಕಾರಿಪುರದ ಹುಚ್ಚುರಾಯಪ್ಪ, ಭದ್ರಾವತಿಯ ಮಾಜಿ ಉಪಮೇಯರ್ ಮೊಹ್ಮದ್ ಸನಾವುಲ್ಲಾ, ಶಂಕರರಾವ್, ಜಯಣ್ಣ ಇತರರು ಮಾತನಾಡಿದರು.

ಆರಂಭದಲ್ಲಿ ಸಂಚಾಲಕ ಆರ್.ಟಿ. ನಟರಾಜ್ ಪ್ರಾಸ್ತಾವಿಕ ಭಾಷಣ ಮಾಡಿದರು, ಪ್ರತಿಭಟನಾ ಕಾಯ೯ಕ್ರಮದಲ್ಲಿ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಕಾಯ೯ದಶಿ೯ ಎಸ್. ಬಿ. ಅಶೋಕ್ ಕುಮಾರ್, ಆದಿ ಜಾಂಬವ ಸಂಘದ ಅಣ್ಣಪ್ಪ, ನರಸಪ್ಪ, ಸಮಗಾರ ಸಂಘದ ಅಶೋಕ್ ಕುಮಾರ್, ಕಾಳಿದಾಸ ಸೊಸೈಟಿ ಅಧ್ಯಕ್ಷ ಪಿ. ಬಾಲಪ್ಪ, ಅಣ್ಣಾ ಹಜಾರೆ ಹೋರಾಟ ಸಮಿತಿಯ ನಾಗರಾಜ್, ನಿವೃತ್ತ ಪ್ರಾಂಶುಪಾಲರುಗಳಾದ ಚಂದ್ರಪ್ಪ, ಕೃಷ್ಣಮೂರ್ತಿ, ಭಾಸ್ಕರ್, ಸತೀಶ್ ಇತರರು ಪಾಲ್ಗೊಂಡಿದ್ದರು.

ಕೊನೆಯಲ್ಲಿ ಶೀಘ್ರವೆ ಕಾಂತರಾಜ ಆಯೋಗದ ವರದಿ ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸುವ ಹಕ್ಕೊತ್ತಾಯದ ಮನವಿಪತ್ರವನ್ನು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಯಿತು.

Related Post