ಶಿವಮೊಗ್ಗ: ಲಂಚ ಸ್ವೀಕರಿಸುವ ವೇಳೆ ಸೊರಬ ಪುರಸಭೆ ಅಧಿಕಾರಿಯೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಇಂದು(ಬುಧವಾರ) ನಡೆದಿದೆ.
ಸೊರಬ ಪುರಸಭೆಯ ಕಂದಾಯ ನಿರೀಕ್ಷಕರಾಗಿರುವ ವಿನಾಯಕ ಗುರುವಯ್ಯ ಅವರು ಲೋಕಾಯುಕ್ತ ಪೋಲೀಸರ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ.
ಪ್ರತಿಭಾ ಎಂ.ನಾಯ್ಕರಿಗೆ ಖಾಲಿ ನಿವೇಶನಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಿಕೊಡಲು ಗುರುವಯ್ಯ ಪ್ರತಿಭಾ ಅವರಿಂದ 50,000 ರೂಪಾಯಿ ಬೇಡಿಕೆ ಇಟ್ಟಿದ್ದರು ಬಳಿಕ ಹಣಕಾಸಿನ ವಿಚಾರದ ಬಗ್ಗೆ ಚರ್ಚೆ ನಡೆದು ಕೊನೆಗೆ 40,000 ಸಾವಿರ ರೂಗಳಿಗೆ ಡೀಲ್ ಕುದುರಿತ್ತು, ಅದರಂತೆ ಗುರುವಯ್ಯ ಅವರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.