Trending

ಆಟೋ ಗ್ಯಾಸ್ ದರ ಜಿಗಿತ : ಶಿವಮೊಗ್ಗದಲ್ಲಿ ಚಾಲಕರಿಗೆ ಸಂಕಷ್ಟ

Spread the love

ಶಿವಮೊಗ್ಗ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಅಡುಗೆ ಅನಿಲವಷ್ಟೇ ಅಲ್ಲದೆ, ಆಟೋ ಅನಿಲಕ್ಕೂ ಸಮಸ್ಯೆ ಉಂಟಾಗಿದೆ. ಆಟೋ ಗ್ಯಾಸ್​​​​ ಪೊರೈಕೆಯಲ್ಲಿ ವತ್ಯಯದಿಂದಾಗಿ ಆಟೋ ಗ್ಯಾಸ್​​ ದರ ಕಳೆದ ನಾಲ್ಕು ದಿನಗಳಲ್ಲಿ 21 ರೂ. ದರ ಏರಿಕೆ ಆಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಪ್ರತಿ ಕೆಜಿ ಗ್ಯಾಸ್​ಗೆ 61ರೂ. ಇತ್ತು. ಇಂದು ಪ್ರತಿ ಕೆ‌ಜಿ ಗ್ಯಾಸ್‌ಗೆ 82 ರೂ ಆಗಿದೆ. ಇದು ಆಟೋ ಚಾಲಕರಿಗೆ ಸಂಕಟವನ್ನು ತಂದಿದೆ.

ಆಟೋ ಗ್ಯಾಸ್​​ ದರ ಏರಿಕೆ ಆಗಿದೆ ಎಂದು ನಾವು ಪ್ರಯಾಣಿಕರಿಗೆ ಹೇಳಿದರೆ ಅವರು ಆಟೋವನ್ನು ಹತ್ತುವುದಿಲ್ಲ. ಅಲ್ಲದೇ ಆಟೋ ದರ ಏರಿಕೆ ಮಾಡಿದರೆ ಪ್ರಯಾಣಿಕರು ಪ್ರಶ್ನೆ ಮಾಡುತ್ತಾರೆ. ಇದರಿಂದ ನಾವು ದಿನವಿಡಿ ದುಡಿದ ಹಣ ಗ್ಯಾಸ್​ಗೆ ಇಡಬೇಕಾದ ಅನಿವಾರ್ಯತೆಯಲ್ಲಿದ್ದೇವೆ. ಇದರಿಂದ ನಮಗೆ ಸುಗಮವಾಗಿ ಗ್ಯಾಸ್​​ ಲಭ್ಯವಾಗುವಂತೆ ಇಂಧನ ಸಚಿವರು ಏನಾದರೂ ಮಾಡಬೇಕೆಂದು ಆಟೋ ಚಾಲಕರು ವಿನಂತಿಸಿ‌ಕೊಂಡಿದ್ದಾರೆ.

ಚಾಲಕರ ಮಾತಿನಂತೆ,

  • ಗ್ಯಾಸ್ ದರ ಏರಿಕೆಯಿಂದ ದಿನಸಿ ಆದಾಯ ಕಡಿಮೆಯಾಗಿದೆ

  • ಪ್ರಯಾಣ ದರ ಹೆಚ್ಚಿಸುವ ಒತ್ತಡ ಹೆಚ್ಚಾಗಿದೆ

  • ಕೆಲವು ಆಟೋಗಳು ರಸ್ತೆಗಿಳಿಯದೆ ನಿಲ್ಲುವ ಪರಿಸ್ಥಿತಿ ಬಂದಿದೆ

ಇತ್ತೀಚೆಗೆ ಗ್ಯಾಸ್ ಸರಬರಾಜಿನಲ್ಲಿ ಉಂಟಾದ ವ್ಯತ್ಯಯದಿಂದ ದೇಶದ ಹಲವು ನಗರಗಳಲ್ಲಿ ಆಟೋ ಚಾಲಕರು ಸಂಕಷ್ಟ ಎದುರಿಸುತ್ತಿರುವುದಾಗಿ ವರದಿಗಳು ಸೂಚಿಸುತ್ತಿವೆ.

ಚಾಲಕರ ಬೇಡಿಕೆ:
ಸರ್ಕಾರ ತಕ್ಷಣ ಗ್ಯಾಸ್ ಸರಬರಾಜು ಸುಧಾರಿಸಿ ದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಟೋ ಚಾಲಕರು ಆಗ್ರಹಿಸಿದ್ದಾರೆ.

[pj-news-ticker]