Spread the love

ಶಿವಮೊಗ್ಗ : 97 ವಯಸ್ಸಿನ ಗಟ್ಟಿಧ್ವನಿಯ ಗಟ್ಟಿಗ ಹಾಗೂ ಪತ್ರಿಕಾರಂಗ ಹಿರಿಯ ಜೀವಿ ಕಾಮ್ರೆಡ್ ಲಿಂಗಪ್ಪ ವಿಧಿವಶರಾಗಿದ್ದಾರೆ. ಶಿವಮೊಗ್ಗದಲ್ಲಿ ಆರಂಭದಲ್ಲಿ ಬರುವ ಅಧಿಕಾರಿಗಳು ಒಮ್ಮೆ ಇವರನ್ನ ಭೇಟಿಯಾದರೆ ಸಾಕು ತಮ್ಮ ಗಟ್ಟಿ ಧ್ವನಿಯಲ್ಲಿ  ಎದೆಯನ್ನೇ ನಡುಗಿಸಿಬಿಡುತ್ತಿದ್ದರು. ಅಂತಹ ಸಾಮರ್ಥ್ಯ ಹೊಂದಿದವರು ಎಂದರೆ ಕಾ.ಲಿಂಗಪ್ಪ ಒಬ್ಬರೇ.

ಹಿರಿಯ ಪತ್ರಕರ್ತ ಕಾಮ್ರೇಡ್ ಲಿಂಗಪ್ಪ ರವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ, ಪ್ರೆಸ್ ಟ್ರಸ್ಟ್, ಸಂಪಾದಕರ ಸಂಘ, ಪತ್ರಿಕಾ ವಿತರಕರ ಸಂಘ ಇವರ ಸಾವಿಗೆ ಸಂತಾಪ ಸೂಚಿಸಿದೆ.

97ನೇ ವರ್ಷದಲ್ಲೂ ಯುವಕನಂತೆ ಎಲ್ಲೆಡೆ ಓಡಾಡಿ, ತಾವೇ ವರದಿ ಮಾಡಿ ಕ್ರಾಂತಿಭಗತ್ ಪತ್ರಿಕೆ ನಡೆಸುತ್ತಿದ್ದ ಲಿಂಗಪ್ಪನವರು ಇಂದಿನ ಯುವ ಪತ್ರಕರ್ತರಿಗೆ ಮಾದರಿಯಾಗಿದ್ದವರು. ಲಿಂಗಪ್ಪ ವಯೋ ಸಹಜ ಕಾಯಿಲೆಯಿಂದ ಇಂದು ವಿಧವಶರಾಗಿದ್ದಾರೆ.

Leave a Reply

Your email address will not be published. Required fields are marked *