ಹೈದರಾಬಾದ್ : ಬೆಟ್ಟಿಂಗ್ ಆ್ಯಪ್ ಪ್ರಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ನಡೆಯುತ್ತಿದೆ. ಆ್ಯಪ್ಗಳ ಪ್ರಚಾರಕರಲ್ಲಿ ಪ್ರಮುಖರಾದ ನಟರಿಗೆ ಬಲೆ ಬೀಸಲಾಗುತ್ತಿದೆ. 6 ಪ್ರಮುಖ ನಟರು ಮತ್ತು ಸೋಷಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ ಸೇರಿದಂತೆ ಒಟ್ಟು 25 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸೌತ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ಸೆಲೆಬ್ರಿಟಿಗಳಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಕಾಶ್ ರಾಜ್, ಮಂಚು ಲಕ್ಷ್ಮಿ, ಪ್ರಣೀತಾ ಮತ್ತು ನೀತು ಅಗರ್ವಾಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಇವರಲ್ಲದೇ, ಶ್ಯಾಮಲಾ, ಶ್ರೀಮುಖಿ, ರಿತು ಚೌಧರಿ, ವಿಷ್ಣುಪ್ರಿಯಾ, ವರ್ಷಿಣಿ, ಅನನ್ಯ ನಾಗಲ್ಲ, ಸಿರಿ ಹನುಮಂತು, ವಸಂತಿಕೃಷ್ಣನ್, ಶೋಭಾಶೆಟ್ಟಿ, ಅಮೃತಾ ಚೌಧರಿ, ನಯನಿ ಪಾವನಿ, ನೇಹಾ ಪಠಾಣ್, ಪದ್ಮಾವತಿ, ಪಾಂಡು, ಇಮ್ರಾನ್ ಖಾನ್, ಹರ್ಷಸಾಯಿ, ಬಯ್ಯಾ ಸನ್ನಿ ಯಾದವ್, ತೇಜ, ಸುಪ್ರೀತ ವಿರುದ್ಧ ಪ್ರಕರಣ ದಾಖಲಾಗಿದೆ. ಮಿಯಾಪುರ ನಿವಾಸಿ ಪ್ರಮೋದ್ ಶರ್ಮಾ ಅವರ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
