Trending

ಸೊರಬದ ಉಳವಿಯಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆ

Spread the love

ಸೊರಬ : ತಾಲ್ಲೂಕಿನ ಉಳವಿಯಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದೆ. ಮಧ್ಯಾಹ್ನ ಆರಂಭಗೊಂಡ ಮಳೆ ಸತತ ಒಂದು ಗಂಟೆಯ ವರೆಗೆ ಸುರಿದಿದೆ.

ಮುಂಗಾರು ಪೂರ್ವ ಮಳೆಯು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಜನತೆಗೆ ತಂಪೆರೆದಿದೆ. ಸೊರಬ, ಸಾಗರ, ಉಳವಿ ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗಿದೆ.

ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಮುರಿದು ಬಿದ್ದಿರುವ ಪರಿಣಾಮ, ವಿದ್ಯುತ್ ತಂತಿಗಳು ತುಂಡಾಗಿವೆ ಎನ್ನಲಾಗುತ್ತಿದೆ. ಹೀಗಾಗಿ ವಿದ್ಯುತ್ ಸರಬರಾಜಿನಲ್ಲೂ ವ್ಯತ್ಯಯ ಉಂಟಾಗೋದಾಗಿ ಮೆಸ್ಕಾಂ ಮೂಲಗಳಿಂದ ತಿಳಿದು ಬಂದಿದೆ.

[pj-news-ticker]