Trending

ಬಂಗಾಳದಲ್ಲಿ TMC ಆಡಳಿತ ಅಂತ್ಯ… 15 ವರ್ಷದ ಬಳಿಕ ಕ್ಷೌರ ಮಾಡಿಸಿಕೊಂಡ ವ್ಯಕ್ತಿ

Spread the love

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) ಸೋಲುವವರೆಗೂ ಕ್ಷೌರ ಮಾಡುವುದಿಲ್ಲ ಎಂದು ಶಪಥ ಮಾಡಿದ್ದ ವ್ಯಕ್ತಿಯೊಬ್ಬರು, ಬರೋಬ್ಬರಿ 15 ವರ್ಷಗಳ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಅಭೂತಪೂರ್ವ ಗೆಲುವು ಸಾಧಿಸಿದು.ಈ ಮೂಲಕ ಹದಿನೈದು ವರ್ಷಗಳ ಹಿಂದೆ ಶಪಥ ಮಾಡಿದ್ದ ವ್ಯಕ್ತಿ ಇದೀಗ ಕ್ಷೌರ ಮಾಡಿಸಿಕೊಳ್ಳುವ ಮೂಲಕ ಪ್ರತಿಜ್ಞೆಯನ್ನು ಪಾಲಿಸಿದ್ದಾರೆ.

ಬಾಮನ್ ಪಾರಾ ಗ್ರಾಮದ ನಿವಾಸಿಯಾಗಿರುವ ಬನೇಶ್ವರ್ ಬರ್ಮನ್ ಎಂಬ ವ್ಯಕ್ತಿಯೇ ಹದಿನೈದು ವರ್ಷಗಳ ಹಿಂದೆ ಪ್ರತಿಜ್ಞೆ ಮಾಡಿದ ವ್ಯಕ್ತಿಯಾಗಿದ್ದಾರೆ, ವೃತ್ತಿಯಲ್ಲಿ ಇಟ್ಟಿಗೆ ಭಟ್ಟಿಯ ಕಾರ್ಮಿಕರಾಗಿರುವ ಬರ್ಮನ್, ಬಿಜೆಪಿ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದಾರೆ.

ಬರ್ಮನ್ ಅವರು 2011ರಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಒಂದು ಪ್ರತಿಜ್ಞೆ ಮಾಡಿದ್ದರು ಅದೇನೆಂದರೆ ಯಾವಗ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರ ಕೊನೆಗೊಳ್ಳುತ್ತದೋ ಅಲ್ಲಿಯವರೆಗೆ ನಾನು ಕ್ಷೌರ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.

ಅಂದಿನಿಂದ ಬರೋಬ್ಬರಿ ಹದಿನೈದು ವರ್ಷಗಳ ಕಾಲ ಕ್ಷೌರ ಮಾಡದೇ ಪ್ರತಿಜ್ಞೆಯನ್ನು ಪಾಲಿಸಿದ್ದ ಬನೇಶ್ವರ್ ಮೊನ್ನೆ ನಡೆದ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಅದಿಕಾರದ ಚುಕ್ಕಾಣಿಯನ್ನು ಹಿಡಿದಿದೆ ಅದರಂತೆ ಬನೇಶ್ವರ್ ಬರ್ಮನ್ ಹದಿನೈದು ವರ್ಷಗಳ ಹಿಂದೆ ಮಾಡಿದ್ದ ಪ್ರತಿಜ್ಞೆಯಂತೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಕ್ಷೌರ ಮಾಡಿಸಿಕೊಳ್ಳುವ ಮೂಲಕ ಪ್ರತಿಜ್ಞೆಯನ್ನು ಕೊನೆಗೊಳಿಸಿದ್ದಾರೆ.

[pj-news-ticker]