Breaking
Tue. Oct 8th, 2024

ಗಣಪತಿ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಗಲಾಟೆ

By Mooka Nayaka News Sep 8, 2024
Spread the love

ಹೊಳೆಹೊನ್ನೂರು: ಗಣಪತಿ ಮೂರ್ತಿ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಗಲಾಟೆ ನಡೆದ ಘಟನೆ ಸಮೀಪದ ಅರಬೀಳಚಿ ಕ್ಯಾಂಪಿನಲ್ಲಿ ಸೆ.7ರ ಶನಿವಾರ ರಾತ್ರಿ ನಡೆದಿದೆ.

ಅಕ್ಕಪಕ್ಕದ ಪೆಂಡಾಲ್ ನವರು ಒಂದೇ ತಂಡದವರನ್ನು ನೇಮಿಸಿದ ಪರಿಣಾಮ ಗಲಾಟೆ ನಡೆದಿರುವುದಾಗಿ ಹೇಳಲಾಗುತ್ತಿದೆ.‌ ಗಲಾಟೆಯಲ್ಲಿ ಪೊಲೀಸರಿಗೂ ಸಣ್ಣಪುಟ್ಟ ಗಾಯವಾಗಿದ್ದು, ಗಲಾಟೆ ತಾರಕಕ್ಕೆ ಏರಿದ ಪರಿಣಾಮ ಪೊಲೀಸರು ಮಧ್ಯಪ್ರವೇಶಿಸಿ ಗಣಪತಿ ವಿಸರ್ಜನೆ ಮಾಡಿರುವುದಾಗಿ ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಅರಬಿಳಚಿ ಕ್ಯಾಂಪ್‌ನಲ್ಲಿ 2 ಗಣಪತಿ ಪೆಂಡಾಲ್‌ಗಳ ನಡುವೆ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಸೇರಿದಂತೆ 6 ಮಂದಿಗೆ ಗಾಯವಾಗಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪಿನ 2 ಕಾಲೋನಿಯಲ್ಲಿ ಗಣಪತಿ ಪ್ರತಿಷ್ಠಾಪನೆ ನಡೆದಿದೆ. ಗಣಪತಿ ಪ್ರತಿಷ್ಠಾಪನೆ ಮೆರವಣಿಗೆಗೆ 2 ಕಡೆಯಿಂದ ಒಂದೇ ತಂಡದವರಿಂದ ಡೊಳ್ಳು ಬಾರಿಸಲು ಮಾತುಕತೆ ನಡೆದಿತ್ತು. 2 ಸಮುದಾಯದವರಿಂದ ಒಂದೇ ಸಮಯಕ್ಕೆ  ಮೆರವಣಿಗೆ ಹೊರಟಿತ್ತು. ನಮ್ಮ ಗಣಪತಿ ಮೆರವಣಿಗೆಗೆ ಡೊಳ್ಳು ಬಾರಿಸು ಎಂದು 2 ಗುಂಪಿನ ನಡುವೆ ಡೊಳ್ಳು ಬಾರಿಸುವವರ ಜೊತೆ ವಾಗ್ವಾದ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಪೊಲೀಸ್ ಸೇರಿದಂತೆ 6 ಮಂದಿಗೆ ಗಾಯವಾಗಿದೆ. ಗಾಯಾಳುಗಳು ಭದ್ರಾವತಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Post