Breaking
Mon. Oct 14th, 2024

ಶಿವಮೊಗ್ಗ: ಚರಂಡಿ ಸ್ಲ್ಯಾಬ್ ಕುಸಿದು ಗುಜರಿ ವ್ಯಾಪಾರಿ ಸಾವು

By Mooka Nayaka News Jan 29, 2024
Spread the love

ಶಿವಮೊಗ್ಗ: ಚರಂಡಿಗೆ ಮುಚ್ಚಿದ ಸ್ಲ್ಯಾಬ್ ಕುಸಿದು ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಶಿವಮೊಗ್ಗ ನಗರದ ವಿನೋಬನಗರ ರೈಲ್ವೆ ಬ್ಯಾರಲಲ್ ರಸ್ತೆಯಲ್ಲಿ ನಡೆದಿದೆ.

ಶಿವಮೊಗ್ಗ ನಗರದ ಬೊಮ್ಮನಕಟ್ಟೆ ನಿವಾಸಿ ಮುತ್ತಪ್ಪ (45) ಮೃತ ವ್ಯಕ್ತಿ. ಇವರು ಗುಜರಿ ವ್ಯಾಪಾರ ಮಾಡುತ್ತಿದ್ದರು.ಮತ್ತಪ್ಪ ಅವರು ಮೂತ್ರ ವಿಸರ್ಜನೆ ವೇಳೆ ಸ್ಲ್ಯಾಬ್ ಕುಸಿದಿದೆ. ಹತ್ತು ಅಡಿ ಆಳದ ಚರಂಡಿಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ.

ಮೃತನ ಮೃತದೇಹ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಕಳಪೆ ಕಾಮಗಾರಿಯೇ ಘಟನೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಲಾಗಿದೆ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Related Post