ಚಿಕ್ಕಮಗಳೂರು: ಮನೆಯಲ್ಲಿದ್ದ ಗನ್ ಒರೆಸುವ ವೇಳೆ ಮಿಸ್ ಫೈರ್ ಆಗಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕಳವಾಸೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಕಳವಾಸೆ ಗ್ರಾಮದ ಅರುಣ್ (47) ಎನ್ನಲಾಗಿದೆ.
ಅರುಣ್ ಅವರು ತನ್ನ ಮನೆಯ ಶೆಡ್ ನಲ್ಲಿದ್ದ ಗನ್ ಒರೆಸುವ ವೇಳೆ ಏಕಾಏಕಿ ಗುಂಡು ಹಾರಿ ಬಲಕಣ್ಣನ್ನು ಹೊಕ್ಕಿದೆ ಪರಿಣಾಮ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದ್ದು, ಇದು ಆತ್ಮಹತ್ಯೆಯೋ ಅಥವಾ ಮಿಸ್ ಫೈರ್ ಆಗಿ ಮೃತಪಟ್ಟಿರುವುದೋ ಸ್ಪಷ್ಟವಾಗಿಲ್ಲ.
ಸದ್ಯ ಮೃತದೇಹವನ್ನು ಪರೀಕ್ಷೆಗಾಗಿ ಹಾಸನದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.