ಶಿವಮೊಗ್ಗ: ಜಿಲ್ಲೆಯ ಜೋಗದ ಜಲಪಾತ ವೀಕ್ಷಣೆಗೆ ಈ ಮೊದಲು ಯಾವುದೇ ಸಮಯ ಇರಲಿಲ್ಲ. ಎಷ್ಟು ಹೊತ್ತಾದರೂ ಜೋಗದ ಜಲಪಾತದ ಸೊಬಗನ್ನು ಸವಿಯಬಹುದಾಗಿತ್ತು. ಆದರೇ ಇನ್ಮುಂದೆ ಇದಕ್ಕೆ ಅವಕಾಶವಿಲ್ಲ. ಕೇವಲ 2 ಗಂಟೆ ಮಾತ್ರವೇ ನೋಡಲು ಸಮಯ ನಿಗದಿ ಮಾಡಲಾಗಿದೆ. ಅಲ್ಲದೇ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಿ, ಪ್ರವಾಸಿಗರಿಗೆ ಬಿಗ್ ಶಾಕ್ ನೀಡಲಾಗಿದೆ.
ಈ ಕುರಿತಂತೆ ಜೋಗ ನಿರ್ವಹಣಾ ಪ್ರಾಧಿಕಾರವು ಆದೇಶ ಹೊರಡಿಸಿದ್ದು, ಜೋಗದ ಜಲಪಾತವನ್ನು 2 ಗಂಟೆಯ ಒಳಗಾಗಿ ನೋಡಿಕೊಂಡು ವಾಪಾಸ್ಸು ಪ್ರವಾಸಿಗರು ಬರಬೇಕು. ಇದಕ್ಕಿಂತ ಹೆಚ್ಚು ಹೊತ್ತು ಇರುವಂತಿಲ್ಲ ಎಂಬುದಾಗಿ ತಿಳಿಸಿದೆ.
ಇದಲ್ಲದೇ ಜೋಗದ ಜಲಪಾತ ವೀಕ್ಷಣೆಗೆ ತೆರಳುವಂತ ಬಸ್ ಗಳಿಗೆ 150 ರೂ ಇದ್ದಂತ ಶುಲ್ಕವನ್ನು 200 ರೂ.ಗೆ ಏರಿಕೆ ಮಾಡಲಾಗಿದೆ. ಕಾರಿಗೆ ರೂ.50 ಇದ್ದಂತ ಶುಲ್ಕವನ್ನು ರೂ.80ಕ್ಕೆ ಏರಿಸಲಾಗಿದೆ. ಪ್ರವಾಸಿಗರಿಗೆ 10 ರೂ ಇದ್ದಂತ ಪ್ರವೇಶ ಶುಲ್ಕವನ್ನು 20 ರೂ.ಗೆ ಹೆಚ್ಚಳ ಮಾಡಿ ಬಿಗ್ ಶಾಕ್ ನೀಡಲಾಗಿದೆ.
ಜೋಗ ಅಭಿವೃದ್ಧಿ ಪ್ರಾಧಿಕಾರದಿಂದ ಪಾರ್ಕಿಂಗ್ ಶುಲ್ಕ, ಪ್ರವೇಶ ಶುಲ್ಕವನ್ನು ಏರಿಕೆ ಮಾಡಿದ್ದು ಏಕೆ.? ಇದು ಪ್ರವಾಸಿಗರ ಸುಲಿಗೆಯೇ? ಜೋಗದ ಜಲಪಾತವನ್ನು 2 ಗಂಟೆಯಲ್ಲಿ ಸವಿಯೋದಕ್ಕೆ ಸಾಧ್ಯವೇ ಎಂಬುದಾಗಿ ಕಿಡಿಕಾರಿದ್ದಾರೆ.