Trending

ಮನೆಗೆಲಸ ಮಾಡುತ್ತಿದ್ಧ ಮಹಿಳೆ ಈಗ ಬಂಗಾಳದ ಶಾಸಕಿ

Spread the love

ಕೋಲ್ಕತಾ : ಇಡೀ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೀವ್ರ ಹಣಾಹಣಿಗೆ ಸಾಕ್ಷಿಯಾಗಿದ್ದ ಭವಾನಿಪುರ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ಎದುರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 15,105 ಮತಗಳಿಂದ ಪರಾಭವ ಕಂಡಿದ್ದಾರೆ. ಜತೆಗೆ ಅವರ ಪಕ್ಷವೂ ಅಧಿಪತನ ಕಂಡಿದೆ.

ರಾಜ್ಯ ವಿಧಾನಸಭೆಯ 294 ಸ್ಥಾನಗಳ ಪೈಕಿ 293 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಭರ್ಜರಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಮಧ್ಯೆ ಮನೆ ಕೆಲಸ ಮಾಡಿ ತಿಂಗಳಿಗೆ ಕೇವಲ 2,500 ರೂ. ಸಂಪಾದಿಸುತ್ತಿದ್ದ ಸಾಮಾನ್ಯ ಮಹಿಳೆ ಕಲಿತಾ ಮಾಝಿ ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ.

ಗುಸ್ಕಾರ ಪುರಸಭೆಯ ನಿವಾಸಿಯಾದ ಮಾಝಿ, ರಾಜಕೀಯಕ್ಕೆ ಪ್ರವೇಶಿಸುವ ಮೊದಲು ನಾಲ್ಕು ಮನೆಗಳಲ್ಲಿ ಮನೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಈ ಹಿಂದೆ 2021 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಆದರೆ ತೃಣಮೂಲ ಕಾಂಗ್ರೆಸ್‌ನ ಅಭೇದಾನಂದ ಥಂಡರ್ ವಿರುದ್ಧ 11,815 ಮತಗಳಿಂದ ಸೋತರು.

ಆದರೆ ಎರಡನೇ ಬಾರಿಯೂ ಅವರ ಮೇಲೆ ವಿಶ್ವಾವಿಟ್ಟ ಬಿಜೆಪಿ ಅವರನ್ನು ಮತ್ತೆ ಇದೇ ಕ್ಷೇತ್ರದಿಂದ ಕಣಕ್ಕಿಳಿಸಿತು. ಈ ಬಾರಿ ಅವರು 1,07,692 ಮತಗಳನ್ನು ಪಡೆದು, ಶ್ಯಾಮ ಪ್ರಸನ್ನ ಲೋಹರ್ ಅವರನ್ನು 12,535 ಮತಗಳ ಅಂತರದಿಂದ ಸೋಲಿಸಿದರು.

294 ಸದಸ್ಯ ಬಲದ ವಿಧಾನಸಭೆಯಲ್ಲಿ 206 ಸ್ಥಾನಗಳನ್ನು ಗಳಿಸಿದ ಬಿಜೆಪಿಯ ಭರ್ಜರಿ ಗೆಲುವಿನ ಮಧ್ಯೆ ಮಾಝಿಯವರ ಗೆಲುವು ಕೂಡ ಗಮನಸೆಳೆದಿದೆ. ಬಿಜೆಪಿಯ ಈ ಗೆಲುವು ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿತು. ಈ ಗೆಲುವಿನ ಪ್ರಮಾಣವು ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ರಚನಾತ್ಮಕ ಬದಲಾವಣೆಯನ್ನು ಸೂಚಿಸುತ್ತದೆ.

[pj-news-ticker]