ಚಿತ್ರದುರ್ಗ : ಖಾಸಗಿ ಶಾಲೆಯಲ್ಲಿ SSLC ತರಗತಿಯಲ್ಲಿ ಓದುತ್ತಿದ್ದ 6 ವಿದ್ಯಾರ್ಥಿಗಳು ದಿಢೀರ್ ಆಗಿ ನಾಪತ್ತೆಯಾಗಿದ್ದಾರೆ. ಈ ಒಂದು ಘಟನೆ ಚಿತ್ರದುರ್ಗದ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ. ವಿದ್ಯಾರ್ಥಿಗಳು ಒಮ್ಮೆಲೇ ಕಾಣೆಯಾಗಿದ್ದನ್ನು ತಿಳಿದ ಪೋಷಕರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ.
ಚಿತ್ರದುರ್ಗದ ಹೊಳಲ್ಕೆರೆ ಪಟ್ಟಣದ, ಡ್ರೀಮ್ ವರ್ಡ್ ಇಂಟರ್ ನ್ಯಾಷನಲ್ ಸ್ಕೂಲ್ ನ ಎಸ್ಎಸ್ಎಲ್ಸಿ ಓದುತ್ತಿದ್ದ 6 ವಿದ್ಯಾರ್ಥಿಗಳಾದ ಶ್ರೇಯಸ್, ಧನುಷ್, ಮನು, ತರುಣ್, ಸಿದ್ದೇಶ್ ಹಾಗೂ ಯಶಸ್ ನಾಪತ್ತೆಯಾಗಿದ್ದಾರೆ.
ಈ ಆರು ಜನ ವಿದ್ಯಾರ್ಥಿಗಳು, ಶಾಲೆಯ ವಸತಿ ಶಾಲೆಯಲ್ಲಿದ್ದರು. ಆದರೆ, ಇಂದು ಬೆಳಗ್ಗೆಯಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಗಳಿಗಾಗಿ ಹುಡುಕಾಟ ಶುರುವಾಗಿದೆ.