ಬಾಗಲಕೋಟೆ : ಅಕಸ್ಮಾತ್ ನಾವು ತ್ಯಾಗ ಮಾಡುವ ಸಂದರ್ಭ ಒದಗಿ ಬಂದರೆ, ನಾವು ಎಲ್ಲವನ್ನೂ ತ್ಯಾಗ ಮಾಡಿ ಕೆಎಸ್ ಈಶ್ವರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿಯೇ ತೀರುತ್ತೇವೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ತಿಳಿಸಿದರು.
ಇಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು, ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಪರ ಶಾಸಕ ಯತ್ನಾಳ ಬ್ಯಾಟಿಂಗ್ ಮಾಡಿದ್ದು, ನಮ್ಮ ಈಶ್ವರಪ್ಪ ಅವರಿಗೆ ಅನ್ಯಾಯ ಆಗಿರಬಹುದು ಆದರೆ ನಾವು ಅವರನ್ನು ಬಿಟ್ಟುಕೊಡುವ ಮಕ್ಕಳಲ್ಲ. ಸಿದ್ದರಾಮಯ್ಯ ಬಳಿಕ ಯಾರು ಅಂದರೆ ಕೆ ಎಸ್ ಈಶ್ವರಪ್ಪ ಬಿಟ್ಟರೆ ಮತ್ಯಾರು ಇಲ್ಲ. ಕೆಎಸ್ ಈಶ್ವರಪ್ಪ ಅವರಿಗೆ ಅನ್ಯಾಯ ಮಾಡಿದ್ದಾರೆ ಅದು ಯಾರು ಮಾಡಿದ್ದಾರೆ ಎಂದು ಗೊತ್ತಿದೆ ಎಂದರು.
ಕೆ ಎಸ್ ಈಶ್ವರಪ್ಪ ಅವರನ್ನು ವಾಪಸ್ ಕರೆದುಕೊಂಡು ಹೋಗುತ್ತೇವೆ. ಒಂದು ವೇಳೆ ನಾವು ತ್ಯಾಗ ಮಾಡುವುದು ಆಯಿತು ಅಂತಾದರೆ, ಈಶ್ವರಪ್ಪ ಅವರನ್ನು ಸಿಎಂ ಮಾಡುವವರೆಗೂ ನಾವು ಬಿಡುವುದಿಲ್ಲ. ಪ್ರಧಾನಿ ಮೋದಿ ಹೇಳಿದ್ದಕ್ಕೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿಲ್ಲ. ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಎಂದು ಪಕ್ಷಕ್ಕೆ ದ್ರೋಹ ಮಾಡಲಿಲ್ಲ ಎಂದು ಅವರ ಪರ ಯತ್ನಾಳ್ ಬ್ಯಾಟ್ ಬೀಸಿದರು.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದಾಗಲೂ ತೊಂದರೆ ಕೊಟ್ಟರು. ಪಕ್ಷದ ಹೈಕಮಾಂಡ್ ಹೇಳಿದ್ದಕ್ಕೆ ರಾಯಣ್ಣ ಬ್ರಿಗೇಡ್ ಕೈಬಿಟ್ಟರು. ಇನ್ಮೇಲೆ ಈಶ್ವರಪ್ಪ ಸಾಹೇಬರಿಗೆ ನಾವೊಂದು ಮಾತು ಹೇಳುತ್ತೇನೆ. ನಿಮ್ಮ ಜೊತೆಗೆ ಚೆನ್ನಮ್ಮ ವಂಶದವರಾದ ನಾವು ಗಟ್ಟಿಯಾಗಿ ನಿಲ್ಲುತ್ತೇವೆ ಎಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಯಲ್ಲಿ ಶಾಸಕ ಬಸನಗೌಡ ಪಾಟೀಲ ಹೇಳಿದರು.