Breaking
Sun. Sep 8th, 2024

ಮುಖ್ಯಮಂತ್ರಿಗೆ ರಾಜೀನಾಮೆ ಕೊಡುವ ಅನಿವಾರ್ಯತೆ ಬಂದಿದೆ: ಬಿ.ವೈ.ರಾಘವೇಂದ್ರ

By Mooka Nayaka News Aug 9, 2024
Spread the love

ಶಿವಮೊಗ್ಗ: ಪಾದಯಾತ್ರೆಯಲ್ಲಿ ದಿನ ದಿನ ಸಂಖ್ಯೆ ಹೆಚ್ಚಾಗುತ್ತಿದೆ. ಉತ್ತಮ ಸ್ಪಂದನೆ ಸಿಗುತ್ತಿದೆ. ಮುಡಾದಲ್ಲಿ ಮುಖ್ಯಮಂತ್ರಿ ಕುಟುಂಬ ಸೈಟ್ ಪಡೆದಿದೆ. 4-5 ಸಾವಿರ ಕೋಟಿ ಹಗರಣ ನಡೆದಿದೆ. ಮುಖ್ಯಮಂತ್ರಿ ಬಗ್ಗೆ ಗೌರವ ಇದೆ. ಅವರ ಮೇಲೆ ಆರೋಪ ಬಂದಿದೆ. ಧಮಕಿ ಹಾಕುವ ಕೆಲಸ ಕಾಂಗ್ರೆಸ್ ನವರು ಮಾಡ್ತಿದ್ದಾರೆ. ಮುಖ್ಯಮಂತ್ರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ‌ಕೊಡುವ ಪ್ರಸಂಗ ಬರುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ. ಇತಿಹಾಸದಲ್ಲಿ ಒಂದು ವಿರೋಧ ಪಕ್ಷದ ವಿರುದ್ಧ ಒಂದು ಆಡಳಿತ ಪಕ್ಷ ಸಮಾವೇಶವನ್ನು ಮಾಡುತ್ತಿದೆ. ಒಂದು ಆಡಳಿತ ಪಕ್ಷವಾಗಿ ಅಭಿವೃದ್ಧಿ ಮಾಡಲು ಅವಕಾಶ ಕೊಟ್ಟು ವಿರೋಧ ಪಕ್ಷವಾಗಿ ಕೆಲಸ ನಾವು ಮಾಡುತ್ತಿದ್ದೇವೆ. ಜನ ಸ್ಪಂದನೆ ನೋಡಿದರೆ ಮುಖ್ಯಮಂತ್ರಿ ರಾಜೀನಾಮೆ ಕೊಡುವ ಅನಿವಾರ್ಯತೆ ಬರುತ್ತದೆ ಎಂದರು

ಹಾಸನದಲ್ಲಿ ಪ್ರೀತಮ್ ಗೌಡ ಹಾಗೂ ಹೆಚ್ ಡಿ ಕೆ ಬೆಂಬಲಿಗರ ಜಟಾಪಟಿ ವಿಚಾರವಾಗಿ ಮಾತನಾಡಿದ ಅವರು, ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಲ್ಲಿ ವ್ಯತ್ಯಾಸವಿರುತ್ತದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿಯವರು ಒಂದಾಗಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದ್ದೇವೆ. ಈ ರೀತಿಯ ಸಣ್ಣ ಪುಟ್ಟ ಸಮಸ್ಯೆಗಳು ಬಂದಾಗ ಕುಳಿತು ಬಗೆಹರಿಸುವ ಕೆಲಸ ಮಾಡುತ್ತೇವೆ ಎಂದರು.

ವಕ್ಪ್ ಆಸ್ತಿ ವಿಚಾರವಾಗಿ ಮಾತನಾಡಿ, ಅನೇಕ ವರ್ಷಗಳಿಂದ ಸ್ವಾತಂತ್ರ್ಯ ನಂತರ ವಕ್ಫ್ ಸಮಿತಿ ರಚನೆ ಮಾಡಿದ್ದರು. ವಕ್ಪ್ ಆಸ್ತಿ ಬಗ್ಗೆ ಸುಪ್ರೀಂ ಕೋರ್ಟ್ ಸಹ ಪ್ರಶ್ನೆ ಮಾಡುವ ಅವಕಾಶ ಇಲ್ಲ. ಅಂತಹ ಅಧಿಕಾರ ಕಾಂಗ್ರೆಸ್ ಕೊಟ್ಟಿತ್ತು. ವಕ್ಫ್ ನಲ್ಲಿ ಮಹಿಳೆಯರಿಗೆ ಅವಕಾಶ ಮಾಡಿಕೊಡಬೇಕು. ವಕ್ಫ್ ಆಸ್ತಿ 1.5 ಲಕ್ಷ ಎಕರೆಯಿಂದ 9 ಲಕ್ಷ ಎಕರೆಗೆ ಏರಿಕೆ ಆಗಿದೆ. ಬಡವರಿಗೂ ನ್ಯಾಯ ಸಿಗುವ ಕೆಲಸ ಆಗಬೇಕು ಎಂದರು.

Related Post