ಬೆಂಗಳೂರು: ಮುಂದಿನ ವಾರದಲ್ಲಿ ಶಿವಮೊಗ್ಗ, ತುಮಕೂರು, ಮೈಸೂರು ಮಹಾ ನಗರ ಪಾಲಿಕೆಗಳಿಗೆ ಚುನಾವಣೆಯನ್ನು ನಡೆಸುವ ಸಂಬಂಧ ದಿನಾಂಕವನ್ನು ಪ್ರಕಟಿಸುವುದಾಗಿ ರಾಜ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ನೂತನ ಆಯುಕ್ತ ಜಿ.ಎಂಸ್ ಸಂಗ್ರೇಶಿ ಅವರು, ಚುನಾವಣಾ ಆಯೋಗದಿಂದ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿರುವಂತ ಅರ್ಜಿಯಲ್ಲಿ 2 ಚುನಾವಣೆಗೆ ಸಂಬಂಧಿಸಿದಂತೆ ವಿಚಾರಣೆಯು ಬಾಕಿ ಇದೆ. ಆ ಎರಡು ಚುನಾವಣಾ ಅರ್ಜಿಯ ವಿಚಾರಣೆ ಪೂರ್ಣಗೊಂಡ ನಂತ್ರ, ತಕ್ಷಣವೇ ಚುನಾವಣೆಗೆ ದಿನಾಂಕ ಘೋಷಿಸುವುದಾಗಿ ಹೇಳಿದರು.
ನಿಯಮಾವಳಿಗಳ ಪ್ರಕಾರ ಅವಧಿ ಮುಗಿದಂತ 6 ತಿಂಗಳ ಒಳಗಾಗಿ ಚುನಾವಣೆಗೆ ಸರ್ಕಾರವು ಮುಂದುವರೆಯದೇ ಇದ್ದರೇ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ಅದರಂತೆ ಈಗಾಗಲೇ ಕೋರ್ಟ್ ನಲ್ಲಿ ಸಲ್ಲಿಸಿರುವಂತ ಅರ್ಜಿಯ ವಿಚಾರಣೆ ನಡೆದು, 2 ಕೇಸ್ ವಿಚಾರಣೆ ಮಾತ್ರ ಬಾಕಿ ಇದೆ. ಮುಂದಿನ ವಾರದಲ್ಲಿ ಶಿವಮೊಗ್ಗ, ತುಮಕೂರು, ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಘೋಷಿಸುವುದಾಗಿ ತಿಳಿಸಿದರು.