Breaking
Mon. Oct 14th, 2024

ಸಾಗರ : ಡೆಂಗ್ಯೂಗೆ ಮೊದಲ ಬಲಿ; ಆರೋಗ್ಯ ಇಲಾಖೆ ಸಿಬ್ಬಂದಿ ಮೃತ್ಯು

By Mooka Nayaka News Jun 13, 2024
Spread the love

ಸಾಗರ: ರಾಜ್ಯದಲ್ಲಿ ಡೆಂಗ್ಯೂಗೆ ಮೊದಲ ಬಲಿಯಾಗಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿಯೇ ಮೃತಪಟ್ಟಿದ್ದಾರೆ.

ಸಾಗರ ತಾಲೂಕು ಆಸ್ಪತ್ರೆಯ ಡಯಾಲಿಸಿಸ್ ಸಿಬ್ಬಂದಿ ನಾಗರಾಜ್(35) ಡೆಂಗ್ಯೂಗೆ ಮೃತಪಟ್ಟವರು.

ನಾಗರಾಜ್ ಕಳೆದ ಕೆಲ ದಿನಗಳಿಂದ ಡೆಂಗ್ಯೂನಿಂದ ಬಳಲುತ್ತಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಗರ್ ನಿಂದಲೂ ಬಳಲುತ್ತಿದ್ದ ನಾಗರಾಜ್, ಇಂದು ಚಿಕಿತ್ಸೆ ಫಲಿಸದೇ ಡೆಂಗ್ಯೂಗೆ ಬಲಿಯಾಗಿದ್ದಾರೆ. ಪ್ಲೇಟ್ ಲೆಟ್ 26,000 ಕಡಿಮೆ ಕುಸಿದಿತ್ತು ಎನ್ನಲಾಗಿದೆ.

ಆರೋಗ್ಯ ಇಲಾಖೆ ಸಿಬ್ಬಂದಿ ನಾಗರಾಜ್ ಡೆಂಗ್ಯೂನಿಂದ ಮೃತಪಟ್ಟಿರುವುದನ್ನು ಸಾಗರ ತಾಲೂಕು ವೈದ್ಯಾಧಿಕಾರಿ ಡಾ.ಪರಪ್ಪ ದೃಢಪಡಿಸಿದ್ದಾರೆ. ಸಾಗರದಲ್ಲಿ ಡೆಂಗ್ಯೂಗೆ ಇದು ಮೊದಲ ಬಲಿಯಾಗಿದೆ.

Related Post