Trending

ರೈಲು ಪ್ರಯಾಣಿಕರ ಗಮನಕ್ಕೆ: ತಾಳಗುಪ್ಪ- ಬೆಂಗಳೂರು ಎಕ್ಸ್‌ಪ್ರೆಸ್ ಸಂಚಾರದಲ್ಲಿ ವ್ಯತ್ಯಯ

Spread the love

ಆನಂದಪುರ: ತುಮಕೂರು ಭಾಗದಲ್ಲಿ ತುರ್ತು ರೈಲ್ವೆ ಎಂಜಿನಿಯರಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ತಾಳಗುಪ್ಪದಿಂದ ಬೆಂಗಳೂರಿಗೆ ಸಂಚರಿಸುವ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 20652) ಸಂಚಾರದಲ್ಲಿ ಡಿಸೆಂಬರ್ ತಿಂಗಳ ನಾಲ್ಕು ದಿನಗಳ ಕಾಲ ಬದಲಾವಣೆ ಮಾಡಲಾಗಿದೆ.

ಡಿಸೆಂಬರ್ 17 (ಬುಧವಾರ), 20 (ಶನಿವಾರ), 21 (ಭಾನುವಾರ) ಹಾಗೂ 24ರಂದು (ಬುಧವಾರ) ಈ ರೈಲು ತಾಳಗುಪ್ಪದಿಂದ ಅರಸೀಕೆರೆಯವರೆಗೆ ಮಾತ್ರ ಸಂಚರಿಸಲಿದೆ. ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಅರಸೀಕೆರೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಸಂಚರಿಸಬೇಕಾಗುತ್ತದೆ.

ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಿ ಸಹಕರಿಸಬೇಕೆಂದು ರೈಲ್ವೆ ಇಲಾಖೆ ತಿಳಿಸಿದೆ.

[pj-news-ticker]