ತೀರ್ಥಹಳ್ಳಿ : ತಾಲೂಕಿಗೆ ನೂತನ ತಹಸೀಲ್ದಾರ್ ಆಗಿ ಶಿಕಾರಿಪುರದಿಂದ ಆಗಮಿಸಿರುವ ರಂಜಿತ್ ಎಸ್ ಅವರನ್ನು ಸರ್ಕಾರ ಪ್ರಭಾರ ತಹಸೀಲ್ದಾರ್ ರನ್ನಾಗಿ ನೇಮಕ ಮಾಡಲಾಗಿದೆ.
ಮೂಲತಃ ಚೆನ್ನಗಿರಿ ತಾಲೂಕಿನವರಾದ ರಂಜಿತ್ ಕೆಎಎಸ್ ಅಧಿಕಾರಿಯಾಗಿದ್ದಾರೆ. ಅವರು 19-10-2024ರ ಶನಿವಾರದಂದು ತೀರ್ಥಹಳ್ಳಿಯ ತಹಸೀಲ್ದಾರ್ ಆಗಿ ಅಧಿಕಾರ ವಹಿಸಿ ಕೊಂಡರು.
ಹಿಂದೆ ಇದ್ದಂತಹ ತಹಶೀಲ್ದಾರ್ ಜಕ್ಕಣ್ಣಗೌಡರ್ ರವರು ಅಕಸ್ಮಿಕವಾಗಿ ಮರಣ ಹೊಂದಿದ ಕಾರಣ ಅವರಿಂದ ತೆರವಾದ ಸ್ಥಾನಕ್ಕೆ ರಂಜಿತ್ ಎಸ್ ರವರನ್ನು ನೇಮಕ ಮಾಡಲಾಗಿದೆ.