Trending

ತೀರ್ಥಹಳ್ಳಿ: ಚಂದದ ಹುಡುಗಿಯರ ಫೋಟೋ ತೆಗೆಯುತ್ತಿದ್ದ ಸೈಕೋ ಪಾತ್ !

Spread the love

ತೀರ್ಥಹಳ್ಳಿ: ಆತ ಸೈಕೋ ಪಾತ್, ಆತನ ವಯಸ್ಸು 50+ ಆದರೆ ಆತನ ಕೆಲಸ ಮಾತ್ರ ಚಂದ ಚಂದದ ಹುಡುಗಿಯರನ್ನು ನೋಡಿ ಅವರ ಫೋಟೋವನ್ನು ತೆಗೆದುಕೊಳ್ಳುವುದು ಇವನ ಹುಚ್ಚು ಹವ್ಯಾಸ. ಇತ್ತೀಚೆಗೆ ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲಿ ಹಾಗೂ ತೀರ್ಥಹಳ್ಳಿ ಪಟ್ಟಣದಲ್ಲಿ ಅನೇಕ ಹುಡುಗಿಯರ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ ವೇಳೆ ಸಾರ್ವಜನಿಕರ ಕೈಗೆ ಈತ ಸಿಕ್ಕಿಬಿದ್ದಿದ್ದಾನೆ.

ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲಿ ಹುಡುಗಿಯರ ಫೋಟೋ ತೆಗೆಯುವಾಗ ಆತನ ವರ್ತನೆ ನೋಡಿ ಪರಿಶೀಲಿಸಿದಾಗ ಆತ ಹುಡುಗಿಯರ ಫೋಟೋ ತೆಗೆಯುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಸಾರ್ವಜನಿಕರು ಪ್ರಶ್ನೆ ಮಾಡಿದಾಗ ಆತ ಅದನ್ನು ಒಪ್ಪಿಕೊಳ್ಳದೆ ಪರಾರಿ ಆಗುತ್ತಿದ್ದ ವೇಳೆ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಗ್ಯಾಲರಿ ತುಂಬಾ ಹುಡುಗಿಯರ ಫೋಟೋ !

ಪೊಲೀಸ್ ಠಾಣೆಯಲ್ಲಿ ಪೊಲೀಸರು ತನಿಖೆಗೆ ಒಳಪಡಿಸಿದಾಗ ಈತನ ಮೊಬೈಲ್ ನಲ್ಲಿ ಸುಮಾರು 150ಕ್ಕೂ ಹೆಚ್ಚು ಹುಡುಗಿಯರ ಫೋಟೋಗಳು ಇದ್ದವು ಎಂದು ಹೇಳಲಾಗಿದೆ. ಪೊಲೀಸರು ಈತನ ಮೇಲೆ ಕೇಸು ದಾಖಲಿಸಿ ಜೈಲಿಗೆ ಕಳುಹಿಸಲು ಸಿದ್ಧತೆಯಲ್ಲಿರುವಾಗ ಆತನ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.

ಕುಟುಂಬದವರು ಆತನೊಬ್ಬ ಮಾನಸಿಕ ಅಸ್ವಸ್ಥನೆಂದು ದೃಢಪಡಿಸಿದ ಹಿನ್ನೆಲೆಯಲ್ಲಿ ಮಾನವೀಯತೆಯ ನೆಲೆಗಟ್ಟಿನಲ್ಲಿ ಆತನಿಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸೈಕೋ ತೀರ್ಥಹಳ್ಳಿ ಮಾತ್ರವಲ್ಲದೆ ಹೊಸನಗರ, ಸಾಗರ, ಶಿವಮೊಗ್ಗ ಭಾಗದಲ್ಲೂ ಕೂಡ ಈ ತರಹದ ಚಟುವಟಿಕೆಗಳನ್ನು ಮಾಡಿದ್ದ ಎನ್ನಲಾಗಿದೆ.

ಫೋಟೋ ಬಗ್ಗೆ ಜಾಗ್ರತೆ ಇರಲಿ

ಇತ್ತೀಚೆಗೆ ಹುಡುಗಿಯರ ಫೋಟೋಗಳನ್ನು ತೆಗೆದುಕೊಂಡು ಇತರೆ ಅಶ್ಲೀಲ ವೆಬ್ ಸೈಟ್ ಗಳಲ್ಲಿ ಹಾಕಿ ಹಣ ಮಾಡುವ ದಂಧೆ ಕೂಡ ಶುರುವಾಗಿದೆ.

ಈ ಬಗ್ಗೆ ಹುಡುಗಿಯರು ಕೂಡ ಎಚ್ಚರವಹಿಸಬೇಕು.ಜೊತೆಗೆ ಇಸ್ಟಾಗ್ರಾಮ್, ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಾಕುವಾಗ ಅಥವಾ ಶೇರ್ ಮಾಡುವಾಗ ಗಮನವಹಿಸಬೇಕು. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋಗಳ ಬಗ್ಗೆ ಎಚ್ಚರ ವಹಿಸಬೇಕೆಂದು ಪೋಲಿಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

[pj-news-ticker]