Breaking
Tue. Jul 16th, 2024

ಕೆಲಸದ ನಿಮಿತ್ತ ಶಿವಮೊಗ್ಗ ತೆರಳುವ ವೇಳೆ ಹೃದಯಾಘಾತ… ಮೇಲಿನಕುರುವಳ್ಳಿಯ ಶಶಿಧರ್ ನಿಧನ

By Mooka Nayaka News Jun 20, 2024
Spread the love

ತೀರ್ಥಹಳ್ಳಿ: ಖಾಸಗಿ ಸಂಸ್ಥೆಯಲ್ಲಿ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೇಲಿನಕುರುವಳ್ಳಿಯ ಶಶಿಧರ್ (45) ಅವರು ಹೃದಯಘಾತದಿಂದ ನಿಧನ ಹೊಂದಿದ್ದಾರೆ.

ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಕೆಲಸದ ನಿಮಿತ್ತ ಹೋಗುತ್ತಿದ್ದ ಶಶಿಧರ್ ಅವರಿಗೆ ಮಂಡಗದ್ದೆ ಬಳಿ ಹೃದಯಘಾತವಾಗಿದೆ. ವಿಷಯ ತಿಳಿದು ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಅವರು ಈ ಹಿಂದೆ ಮೇಲಿನ ಕುರುವಳ್ಳಿಯಲ್ಲಿ ಹಾಲಿನ ಡೈರಿ ಮಾಡಿ ತದನಂತರ ಆಟೋ ಚಾಲಕರಾಗಿ, ವಾಗ್ದೇವಿ ಶಾಲೆಯ ಶಾಲಾ ವಾಹನ ಚಾಲಕರಾಗಿ, ನ್ಯಾಷನಲ್ ಸಂಸ್ಥೆಯ ಲಾರಿ ಚಾಲಕರಾಗಿ ಉತ್ತಮ ಸೇವೆ ಸಲ್ಲಿಸಿದ್ದು ಎಲ್ಲರೊಂದಿಗೆ ತಮ್ಮ ಮೃದು ಸ್ವಭಾವದ ಮಾತುಗಳಿಂದ ಚಿರಪರಿಚಿತರಾಗಿದ್ದರು.

ಮೃತ ಶಶಿಧರ್, ಪತ್ನಿ, ಪುತ್ರಿ ಹಾಗೂ ತಂದೆ ಸೇರಿದಂತೆ ಅಪಾರ ಬಂಧು ಬಳಗ ಸ್ನೇಹಿತರನ್ನು ಅಗಲಿದ್ದಾರೆ. ಶಶಿಧರ್ ಅವರ ಅಗಲಿಕೆಗೆ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.

Related Post