Breaking
Tue. Oct 8th, 2024

ಪೊಲೀಸ್‌ ಗಾಡೀಲಿ ವೈರಲ್‌ ಆಗಿದ್ದ ಗಣೇಶನಿಗೆ ಸಿಕ್ತು ‘ವಿಸರ್ಜನೆ’ ಭಾಗ್ಯ

By Mooka Nayaka News Sep 15, 2024
Spread the love

ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಗಲಭೆ ಖಂಡಿಸಿ ಹಿಂದೂ ಸಂಘಟನೆಗಳು ಬೆಂಗಳೂರಿನ ಟೌನ್‌ಹಾಲ್‌ ಬಳಿ ಬೃಹತ್‌ ಪ್ರತಿಭಟನೆ ನಡೆಸಿದ್ದವು. ನಾಗಮಂಗಲದಲ್ಲಿ ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಾಟ ಖಂಡಿಸಿ ಇಲ್ಲಿಯೂ ಗಣೇಶನ ಮೂರ್ತಿ ತಂದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದು, ಆ ಮೂರ್ತಿಯನ್ನು ಪೊಲೀಸರ ವಾಹನದಲ್ಲಿ ಕೂರಿಸಿದ್ದರು.

ಗಣೇಶ ಮೂರ್ತಿ ಪೊಲೀಸರ ಗಾಡಿಯಲ್ಲಿದ್ದ ಫೋಟೋವೊಂದು ಎಲ್ಲೆಡೆ ಹರಿದಾಡಿತ್ತು. ದೇಶಾದ್ಯಂತ ಪೊಲೀಸರ ಈ ನಡೆಗೆ ಭಾರಿ ವಿರೋಧ ಕೂಡ ವ್ಯಕ್ತವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೂ ಈ ಘಟನೆ ಉಲ್ಲೇಖಿಸಿ, ನಿನ್ನೆ ಹರಿಯಾಣದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಕುಟುಕಿದ್ದರು.

ದೇಶದೆಲ್ಲೆಡೆ ಚರ್ಚೆಗೆ ಕಾರಣವಾಗಿರುವ ಈ ಗಣೇಶನಿಗೆ ಇಂದು ವಿಸರ್ಜನೆ ಭಾಗ್ಯ ಸಿಕ್ಕಿದೆ. ಮೊನ್ನೆ ಪ್ರತಿಭಟನೆ ವೇಳೆ ಗಾಡಿಯಲ್ಲಿ ಕೂರಿಸಿದ್ದ ಪೊಲೀಸರೇ ಈ ಮೂರ್ತಿಯನ್ನು ಇಂದು ಖುದ್ದು ವಿಸರ್ಜನೆ ಮಾಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿರುವ ಬೆಂಗಳೂರಿನ ಎಸ್‌.ಜೆ.ಠಾಣೆ ಪೊಲೀಸರು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ನಂತರ ಪೊಲೀಸ್‌ ಅಧಿಕಾರಿಗಳು ಧಾರ್ಮಿಕ ವಿಧಿವಿಧಾನಗಳೊಂದಿಗೆ ಗಣೇಶ ಮೂರ್ತಿಯ ವಿಸರ್ಜನೆ ಮಾಡಿರುತ್ತಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

Related Post