Breaking
Mon. Oct 14th, 2024

ಕೊಲೆ ಪ್ರಕರಣದಲ್ಲಿ ದರ್ಶನ್‌ ಅರೆಸ್ಟ್‌ ಬೆನ್ನಲ್ಲೇ, ನಟಿ ಪವಿತ್ರಾ ಗೌಡ ಪೊಲೀಸರ ವಶಕ್ಕೆ

By Mooka Nayaka News Jun 11, 2024
Spread the love

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ಸೇರಿದಂತೆ 10 ಜನರನ್ನು ಬಂಧಿಸಿದ ಬೆನ್ನಲ್ಲೇ ನಟಿ ಪವಿತ್ರಾ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನಟ ದರ್ಶನ್‌ ಅವರೊಂದಿಗೆ ಕಳೆದ ಕೆಲ ಸಮಯದಿಂದ ಪವಿತ್ರಾ ಗೌಡ ಆತ್ಮೀಯವಾಗಿದ್ದಾರೆ. ದರ್ಶನ್‌ ಹಾಗೂ ಪವಿತ್ರಾ ಹಲವು ಸಮಾರಂಭದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ನಡುವಿನ ಸ್ನೇಹದ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆದಿದೆ.

ಪವಿತ್ರಾ ಗೌಡಗೆ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎನ್ನುವ ವ್ಯಕ್ತಿ ಸೋಶಿಯಲ್‌ ಮೀಡಿಯಾದಲ್ಲಿ ಮೆಸೇಜ್‌ ಹಾಗೂ ಆಶ್ಲೀಲ, ಫೋಟೋ ವಿಡಿಯೋಗಳನ್ನು ಕಳುಹಿಸುತ್ತಿದ್ದ. ಈ ವಿಚಾರ ದರ್ಶನ್‌ ಅವರ ಅಭಿಮಾನಿಯೊಬ್ಬನಿಗೆ ತಿಳಿದಿದೆ. ಇದಾದ ಬಳಿಕ ಗುಂಪು ಸೇರಿಕೊಂಡು ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಶೆಡ್‌ ವೊಂದರಲ್ಲಿ ಇಟ್ಟು, ಹಲ್ಲೆಗೈದು ಕೊಲೆ ಮಾಡಿ ಮೃತದೇಹವನ್ನು ಮೋರಿಯೊಂದಕ್ಕೆ ಎಸೆದಿದ್ದಾರೆ.

ಈ ಸಂಬಂಧ ಪೊಲೀಸರಿಗೆ ಅಪಾರ್ಟ್ಮೆಂಟ್‌ ವೊಂದರ ಭದ್ರತಾ ಸಿಬ್ಬಂದಿಯೊಬ್ಬರು ಮೃತದೇಹವನ್ನು ನಾಯಿಗಳು ಎಳೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಮೊದಲಿಗೆ ಆರೋಪಿಗಳು ಬೇರೆ ಕಾರಣಗಳನ್ನು ಹೇಳಿದ್ದು, ಆ ಬಳಿಕ ದರ್ಶನ್‌ ಅವರ ಸೂಚನೆ ಮೇರೆಗೆ ಕೊಲೆ ಮಾಡಿದ್ದೇವೆ ಎಂದಿದ್ದಾರೆ.

ಪೊಲೀಸರು ನಟ ದರ್ಶನ್‌ ಸೇರಿದಂತೆ 10 ಮಂದಿಯನ್ನು ಬಂಧಿಸಿದ್ದಾರೆ. ಇದೀಗ ನಟ ದರ್ಶನ್‌ ಅವರ ಸ್ನೇಹಿತೆ ಪವಿತ್ರಾ ಗೌಡರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರ್‌ ಆರ್‌ ನಗರ ಪೊಲೀಸರು ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಪವಿತ್ರಾ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Related Post