Breaking
Tue. Jul 16th, 2024

9 ತಿಂಗಳ ಹಿಂದೆ ನಾಪತ್ತೆಯಾದ ಮಗಳ ಬಗ್ಗೆ DCM ಪವನ್ ಕಲ್ಯಾಣ್ ಬಳಿ ದೂರು.. 9 ದಿನದಲ್ಲಿ ಪತ್ತೆ

By Mooka Nayaka News Jul 5, 2024
Spread the love

ಆಂಧ್ರಪ್ರದೇಶ: ಕಾಲೇಜಿಗೆ ಹೋಗಿದ್ದ ಮಗಳು ನಾಪತ್ತೆಯಾಗಿ ಸರಿ ಸುಮಾರು ಒಂಬತ್ತು ತಿಂಗಳು ಕಳೆದಿದ್ದು ಇದೀಗ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪವನ್ ಕಲ್ಯಾಣ್ ಅವರ ಆದೇಶದ ಮೇರೆಗೆ ಪೊಲೀಸರು ಕೇವಲ 9 ದಿನದಲ್ಲಿ ಬಾಲಕಿಯನ್ನು ಪತ್ತೆ ಹಚ್ಚಿದ್ದಾರೆ.

ಏನಿದು ಪ್ರಕರಣ:

ಆಂಧ್ರಪ್ರದೇಶದಲ್ಲಿ ಬಾಲಕಿಯರು, ಮಹಿಳೆಯರು ನಾಪತ್ತೆಯಾಗುತ್ತಿದ್ದು ಈ ಕುರಿತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ತನ್ನ ಅಧಿಕಾರಿಗಳ ಬಳಿ ಸಭೆಯನ್ನೂ ನಡೆಸಿದ್ದಾರೆ ಈ ನಡುವೆ ಪವನ್ ಕಲ್ಯಾಣ್ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂ ಗೆ ಭೇಟಿ ನೀಡಿದ್ದರು.

ಈ ವೇಳೆ ಅಲ್ಲಿಗೆ ಬಂದ ಮಹಿಳೆಯೊಬ್ಬರು ಉಪಮುಖ್ಯಮಂತ್ರಿಗಳನ್ನು ಭೇಟಿಯಾಗಿ ತನ್ನ ಮಗಳು ಒಂಬತ್ತು ತಿಂಗಳ ಹಿಂದೆ ಕಾಲೇಜಿಗೆ ಹೋದವಳು ಮರಳಿ ಮನೆಗೆ ಬರಲಿಲ್ಲ ಹುಡುಕಿಕೊಡಿ ಸಾರ್ ಎಂದು ಕೇಳಿಕೊಂಡಿದ್ದಾರೆ, ಕೂಡಲೇ ಮಹಿಳೆಯ ಮನವಿಗೆ ಸ್ಪಂದಿಸಿದ ಪವನ್ ಕಲ್ಯಾಣ್ ಸಂಬಂಧಿತ ಅಧಿಕಾರಿಗಳ ಬಳಿ ಮಾತನಾಡಿ ಕೂಡಲೇ ಪ್ರಕರಣವನ್ನು ಇತ್ಯರ್ಥಪಡಿಸಲು ಸೂಚನೆ ನೀಡಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ತನಿಖಾ ತಂಡ ನಾಪತ್ತೆಯಾದ ಬಾಲಕಿ ಅದೇ ಕಾಲೇಜಿನಲ್ಲಿ ಕಲಿಯುತ್ತಿದ್ದ ವಿಜಯವಾಡದ ರಾಮವರಪ್ಪಾಡು ಮೂಲದ ಯುವಕನೊಂದಿಗೆ ಜಮ್ಮುವಿನಲ್ಲಿ ಇರುವುದು ಪತ್ತೆಯಾಗಿದೆ. ಕೂಡಲೇ ಅಲ್ಲಿಗೆ ತೆರಳಿದ ತಂಡ ಇಬ್ಬರನ್ನೂ ವಶಕ್ಕೆ ಪಡೆದು ಜಮ್ಮುವಿನಿಂದ ವಿಜಯವಾಡಕ್ಕೆ ಕರೆತಂದಿದ್ದಾರೆ.

ವಿಚಾರಣೆ ವೇಳೆ ಯುವಕ ನನ್ನನ್ನು ಪ್ರೀತಿಸುವ ನಾಟಕವಾಡಿ ಬಲವಂತವಾಗಿ ಹೈದರಾಬಾದ್ ಗೆ ಕರೆದುಕೊಂಡು ಹೋಗಿದ್ದ ಕೆಲ ದಿನಗಳ ಬಳಿಕ ಪೊಲೀಸರು ತಮ್ಮನ್ನು ಹುಡುಕಬಹುದು ಎಂದು ಜಮ್ಮುವಿಗೆ ಹೋಗಲು ನಿರ್ಧರಿಸಿದ್ದ ಆದರೆ ಕೈಯಲ್ಲಿ ಹಣವಿರದ ಕಾರಣ ಯುವಕ ತನ್ನ ಮೊಬೈಲ್ ಹಾಗೂ ನನ್ನ ಬಳಿ ಇದ್ದ ಚಿನ್ನಾಭರಣವನ್ನು ಮಾರಾಟ ಮಾಡಿ ಜಮ್ಮು ಗೆ ತೆರಳಿದೆವು ಅಲ್ಲಿ ಗೆಳೆಯ ಒಂದು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಆದರೆ ನನಗೆ ಮೊಬೈಲ್ ಬಳಸಲು ಆತ ಅವಕಾಶ ನೀಡಿಲ್ಲ ಎಂದಿದ್ದಾಳೆ ಒಮ್ಮೆ ಆತ ಕೆಲಸಕ್ಕೆ ಹೋಗಿದ್ದಾಗ ಹೇಗೋ ತನ್ನ ಸಹೋದರಿಗೆ ಇನ್ಸ್ಟಾಗ್ರಾಮ್ ಮೂಲಕ ಸಂದೇಶ ಕಳುಹಿಸಿದ್ದಾಳೆ ಇದರ ಬೆನ್ನು ಹತ್ತಿದ ಪೊಲೀಸರು ಇಬ್ಬರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಯುವಕನ ವಿರುದ್ಧ (ಐಪಿಸಿ) ಸೆಕ್ಷನ್ 366 (ಅಪಹರಣ) ಮತ್ತು 344 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಒಂಬತ್ತು ತಿಂಗಳ ಹಿಂದೆಯೇ ಮಹಿಳೆ ದೂರು ನೀಡಿದ್ದರು:

ಮಗಳು ನಾಪತ್ತೆಯಾಗಿರುವ ಕುರಿತು ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕ ಯುವತಿ ಇಬ್ಬರು ಜಮ್ಮುವಿನಲ್ಲಿ ಇರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು ಆದರೆ ಪೊಲೀಸರು ತಮ್ಮ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಸಿಮ್ ಬದಲಾಯಿಸಿದ್ದಾನೆ ಇದರಿಂದ ಪೊಲೀಸರು ತಮ್ಮ ಕಾರ್ಯವನ್ನು ಅರ್ಧಕ್ಕೆ ಬಿಟ್ಟು ಬಿಟ್ಟಿದ್ದಾರೆ, ಇದೀಗ ಒಂಬತ್ತು ತಿಂಗಳ ಬಳಿಕ ಉಪಮುಖ್ಯಮಂತ್ರಿಗಳ ಆದೇಶದ ಮೇರೆಗೆ ಪೊಲೀಸರು ಈ ಜೋಡಿಗಳನ್ನು ಪತ್ತೆ ಹಚ್ಚಿದ್ದು ಪೊಲೀಸರ ಬಗ್ಗೆ ಜನ ಆಡಿಕೊಳ್ಳುವಂತಾಗಿದೆ, ಅಲ್ಲದೆ ಕರ್ತವ್ಯದಲ್ಲಿ ನಿರ್ಲಕ್ಷ ತೋರಿಸಿದ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಡಿಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Related Post