Breaking
Sun. Sep 8th, 2024

1 ವರ್ಷದ ಹಿಂದೆ ಮದುವೆಯಾಗಿದ್ದ ರೇಣುಕಾಸ್ವಾಮಿ… ಪತ್ನಿ 5 ತಿಂಗಳ ಗರ್ಭಿಣಿ

By Mooka Nayaka News Jun 11, 2024
Spread the love

ಚಿತ್ರದುರ್ಗ: ನಗರದ ತುರುವನೂರು ರಸ್ತೆಯಲ್ಲಿರುವ ಬ್ಯಾಂಕ್ ಕಾಲೋನಿಯ ನಿವಾಸಿಗಳಾದ ಕೆಇಬಿ ನಿವೃತ್ತ ನೌಕರರಾದ ಶಿವಾನಂದ ಗೌಡ್ರು ಹಾಗೂ ರತ್ನಪ್ರಭ ಪುತ್ರ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನಕ್ಕೆ ಒಳಗಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಮಗ ಮನೆಗೆ ಬಂದಿರಲಿಲ್ಲ. ರಾತ್ರಿ ಊಟಕ್ಕೆ ಬರುವುದಿಲ್ಲ ಎಂದು ತಾಯಿ ಬಳಿ ಹೇಳಿ ಹೋಗಿದ್ದ ರೇಣುಕಾಸ್ವಾಮಿ ಕೊಲೆಯಾಗಿದ್ದಾನೆ.

ಕೊಲೆಯಾದ ರೇಣುಕಾಸ್ವಾಮಿ ಒಂದು ವರ್ಷದ ಹಿಂದಷ್ಟೇ ಮದುವೆ ಆಗಿದ್ದರು. ಪತ್ನಿ ಐದು ತಿಂಗಳ ಗರ್ಭಿಣಿ. ಪತಿಯ ಕೊಲೆ ಮಾಹಿತಿ ಆಕೆಗೆ ತಿಳಿಸಿಲ್ಲ.

ಶನಿವಾರ ಬೆಳಗ್ಗೆ ಚಿತ್ರದುರ್ಗದ ಮನೆಯಿಂದ ತೆರಳಿದ್ದರು.

ಮೂರ್ನಾಲ್ಕು ವರ್ಷದಿಂದ ಅಪೊಲೊ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಚಳ್ಳಕೆರೆ ಗೇಟ್ ಬಳಿಯಿರುವ ಬಾಲಾಜಿ ಬಾರ್ ಬಳಿ ರೇಣುಕಾಸ್ವಾಮಿ ಬೈಕ್ ಪತ್ತೆಯಾಗಿತ್ತು.

ನಿನ್ನೆ ಮಧ್ಯಾಹ್ನ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸರು ಪೋಷಕರಿಗೆ ಪೋನ್ ಮಾಡಿ ಕರೆಸಿಕೊಂಡಿದ್ದಾರೆ.

Related Post