Breaking
Mon. Jun 17th, 2024

ಡ್ರೈ ಡೇ ಎಫೆಕ್ಟ್‌; ನಾಳೆ ಸಂಜೆಯಿಂದಲೇ ಮದ್ಯ ಮಾರಾಟ ಬಂದ್‌

By Mooka Nayaka News May 31, 2024
Spread the love

ಬೆಂಗಳೂರು: ನಾಳೆಯಿಂದ (ಜೂನ್‌ 1) 5 ದಿನಗಳ ಕಾಲ ಮದ್ಯದಂಗಡಿಗಳು ಕ್ಲೋಸ್‌‌ ಆಗಲಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಪದವೀಧರ ಕ್ಷೇತ್ರದ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿರುವ ಕಾರಣ ಬೆಂಗಳೂರು ಜಿಲ್ಲಾಡಳಿತ ಜೂನ್ ಮೊದಲನೇ ವಾರದಲ್ಲಿ ಮದ್ಯ ಮಾರಾಟವನ್ನು ಬಂದ್ ಮಾಡುವಂತೆ ಆದೇಶ ನೀಡಿದೆ.

ಅದರಂತೆ ಜೂನ್‌ 1 ರಿಂದ 6ರ ಮಧ್ಯರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟಕ್ಕೆ ನಿಷೇಧವಿದೆ. ಈ ಆರು ದಿನದಲ್ಲಿ ಜೂನ್‌ 5ರಂದು ಯಾವುದೇ ನಿಷೇಧವಿಲ್ಲ.

ಜೂನ್ 3 ರಂದು ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನ ನಡೆಯುವುದರಿಂದ ಜೂನ್ 1 ರ ಸಂಜೆ 4 ಗಂಟೆಯಿಂದಲೇ ಬಾರ್ ಬಂದ್ ಆಗಲಿದ್ದು, ಜೂನ್ 3 ರ ಸಂಜೆ 4 ಗಂಟೆವರೆಗೆ ಬಂದ್ ಮಾಡಬೇಕಾಗುತ್ತದೆ. ಅದೇ ರೀತಿ, ಜೂನ್ 4 ರಂದು ದೇಶದಾದ್ಯಂತ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಹಾಗಾಗಿ ಅಂದೂ ಸಹ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಲಿದೆ.

ಜೂನ್ 6 ರಂದು ವಿಧಾನ ಪರಿಷತ್ತಿನ ಚುನಾವಣೆ ಮತ ಎಣಿಕೆ ಇರುವ ಕಾರಣ ಅಂದೂ ಸಹ ಬಾರ್ ಬಂದ್ ಮಾಡುವಂತೆ ಬೆಂಗಳೂರು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ಹೀಗಾಗಿ ಜೂನ್‌ 6ರ ಮಧ್ಯರಾತ್ರಿ 12 ಗಂಟೆವರೆಗೆ ಮದ್ಯ ಪ್ರಿಯರಿಗೆ ಎಣ್ಣೆ ಸಿಗುವುದು ಕಷ್ಟವಾಗಿದೆ. ಚುನಾವಣೆ ಹಾಗೂ ಮತ ಎಣಿಕೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧ ಮಾಡಿ, ಮದ್ಯ ಮಾರಾಟ ರಹಿತ ದಿನಗಳೆಂದು ಘೋಷಣೆ ಮಾಡಲಾಗಿದೆ.

ಲಿಕ್ಕರ್‌ ಶಾಪ್‌, ವೈನ್‌ ಶಾಪ್‌, ಬಾರ್‌ಗಳು ಬಂದ್‌ ಆಗಿರಲಿದೆ. ಹೋಟೆಲ್‌ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವನೆಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

Related Post