Breaking
Tue. Oct 8th, 2024

ಪ್ರಜ್ವಲ್ ರೇವಣ್ಣ 6 ದಿನ ಎಸ್ಐಟಿ ಕಸ್ಟಡಿಗೆ

By Mooka Nayaka News May 31, 2024
Spread the love

ಬೆಂಗಳೂರು : ಲೈಂಗಿಕ ದೌರ್ಜನ್ಯ  ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೂನ್ 6 ರವರೆಗೆ ಅಂದರೆ ಆರು ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

ನಿನ್ನೆ ಮಧ್ಯರಾತ್ರಿ ಜರ್ಮನಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಅವರನ್ನು ಎಸ್ಐಟಿ ಬಂಧಿಸಿದ್ದು, ಇಂದು(ಮೇ 31) ಅವರನ್ನು ವೈದ್ಯಕೀಯ ತಪಾಸಣೆ ಮಾಡಿಸಿ ಬಳಿಕ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ಅಗತ್ಯವಿರುವುದರಿಂದ ತಮ್ಮ ಕಸ್ಟಡಿಗೆ ನೀಡುವಂತೆ  ಮನವಿ ಮಾಡಿದೆ.

ಎಸ್ಐಟಿ ಮನವಿ ಪುರಸ್ಕರಿಸಿದ ಕೋರ್ಟ್, ಪ್ರಜ್ವಲ್ ರೇವಣ್ಣನನ್ನು ಏಳು ದಿನ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶಿಸಿದೆ. ಎಸ್ಐಟಿ ಪರವಾಗಿ ಎಸ್‌ಪಿಪಿ ಅಶೋಕ್ ನಾಯಕ್‌ ಅವರು ವಾದ ಮಂಡಿಸಿದರೆ, ಪ್ರಜ್ವಲ್ ಪರ ಅರುಣ್ ವಾದ ಮಂಡಿಸಿದರು.

Related Post