ಬೆಂಗಳೂರು: ಗ್ಯಾರಂಟಿ ಯೋಜನೆ ಕೇವಲ ತಾತ್ಕಾಲಿಕವಷ್ಟೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ದ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ತಾತ್ಕಾಲಿಕ ಎಂದರೇನು..? ವಿಜಯೇಂದ್ರ ಏನ್ ಶಾಸ್ತ್ರ ಹೇಳ್ತಾರಾ..? ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ. ಮುಂದಿನ ಅವಧಿಗೂ ನಾವೇ ಇರುತ್ತೇವೆ. ಗ್ಯಾರಂಟಿಗಳನ್ನ ಮುಂದುವರೆಸುವ ಕೆಲಸ ಮಾಡುತ್ತೇವೆ ಮುಂದಿನ ವರ್ಷ ಗ್ಯಾರಂಟಿಗಳಿಗೆ 52 ಸಾವಿರ ರೂ ಮೀಸಲು ಇಡುತ್ತೇವೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಒಳ್ಳಯ ಸ್ಪಂದನೆ ಸಿಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನಗೆಲ್ಲಲಿದೆ ಕಾಂಗ್ರೆಸ್ ಗೆ ಒಳ್ಳೆಯ ರೆಸ್ಪಾನ್ಸ್ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.