ಶಿವಮೊಗ್ಗ: ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ. ಚುನಾವಣೆ ಮೂಲಕವೇ ಎಲ್ಲದಕ್ಕೂ ಉತ್ತರ ಕೋಡುತ್ತೇವೆ. ಅನೇಕ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಮುಳುಗಡೆಯ ಮುನ್ಸೂಚನೆ ಎಂದು ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಹೇಳಿದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ನಮ್ಮ ಬಿಜೆಪಿ ಪಕ್ಷ ಹಾಗೂ ಜೆಡಿಎಸ್ ಸಹಕಾರದೊಂದಿಗೆ ಎರಡು ನಾಮಪತ್ರ ಸಲ್ಲಿಸಿದ್ದೇನೆ. ನಾಮಪತ್ರ ಸಲ್ಲಿಸಲು ಸಾಕಷ್ಟು ಜನಸ್ತೋಮ ಬಂದಿದ್ದಾರೆ. ನೂರಕ್ಕೆ ನೂರು ಗೆಲುವು ನಮ್ಮದಾಗಲಿದೆ ಎಂದರು.
ಜೆಡಿಎಸ್ ಸಹಕಾರ ಸಿಕ್ಕಿರುವುದು ವಿಶೇಷವಾಗಿ ಸೌಭಾಗ್ಯ. ಯಡಿಯೂರಪ್ಪ, ಕುಮಾರಸ್ವಾಮಿ ಅವರು ಒಂದೇ ವೇದಿಕೆಯಲ್ಲಿ ನೋಡಿ ಜನ ಖುಷಿಯಾಗಿದ್ದಾರೆ ಜನರ ಭಾವನೆಗಳು ಬೆರೆತಿವೆ. ಕಾರ್ಯಕರ್ತರು ತಮ್ಮ ಜೇಬಿನಿಂದ ಹಣ ಖರ್ಚು ಮಾಡಿಕೊಂಡು ಬಂದಿದ್ದಾರೆ. ಎದುರಾಳಿ ಯಾರಿದ್ದಾರೆ ಎಂದು ನೋಡಲ್ಲ ಎಂದರು.