Breaking
Mon. Oct 14th, 2024

ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

By Mooka Nayaka News Apr 18, 2024
Spread the love

ಶಿವಮೊಗ್ಗ: ಈ ಬಾರಿ ಅರ್ಜುನನ ಎದುರಿಗೆ ಭೀಷ್ಮ ಇದ್ದಾನೆ. ಅರ್ಜುನನ ರಥದಲ್ಲಿ ಕೃಷ್ಣ ಇದ್ದಾನೆ. ಆದರೆ ಭೀಷ್ಮ ಕೃಷ್ಣನ ಪೋಟೋ ಇಟ್ಟುಕೊಂಡಿದ್ದಾನೆ ಎಂದು ಋಷಿಕುಮಾರ ಸ್ವಾಮೀಜಿ ಹೇಳಿದರು.

ಶಿವಮೊಗ್ಗ ಲೋಕಸಭಾ ಕಣವನ್ನು ಕುರುಕ್ಷೇತ್ರ ಯುದ್ಧಕ್ಕೆ ಹೋಲಿಸಿದ ಅವರು ಬಿ.ವೈ.ರಾಘವೇಂದ್ರ ಅವರನ್ನು ಅರ್ಜುನನಿಗೆ ಮತ್ತು ಕೆ.ಎಸ್ ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದರು.

ಭೀಷ್ಮ ಶರಪಂಜರದ ಮೇಲೆ ಮಲಗುವ ಸಾಧ್ಯತೆಯಿದೆ. ಧರ್ಮ ಶಾಸ್ತ್ರ ಧರ್ಮವಾಗಿ ಯುದ್ದ ಮಾಡುವಂತೆ ಹೇಳುತ್ತದೆ. ಧರ್ಮದ ಜೊತೆಯಲ್ಲಿ ಇದ್ದವರು ಅಧರ್ಮವಾಗಿ ನಡೆದು ಕೊಳ್ಳುತ್ತಿದ್ದಾರೆ. ಧರ್ಮ ಯುದ್ದದಲ್ಲಿ ಅರ್ಜುನನಿಗೆ ಜಯ ಸಿಕ್ಕೆ ಸಿಗುತ್ತದೆ ಎಂದು ಋಷಿಕುಮಾರ ಸ್ವಾಮೀಜಿ ಹೇಳಿದರು.

Related Post