ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಹಾಗೂ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ನೀಡಿದೆ. ಕೊಲೆ ಪ್ರಕರಣದಲ್ಲಿ ಜೈಲನಲ್ಲಿರುವ ದರ್ಶನ್ ಅವರನ್ನು ʻಕಾಟೇರʼ ನಿರ್ದೇಶಕ ತರುಣ್ ಸುಧೀರ್ ಭೇಟಿ ಮಾಡಿದ್ದಾರೆ.
ಕೆಲವೇ ದಿನಗಳಲ್ಲಿ ತರುಣ್ ಸುಧೀರ್ ಅವರು ನಟಿ ಸೋನಲ್ ಮಾಂಥೆರೋ ಜೊತೆ ಮದುವೆ ಆಗಲಿದ್ದಾರೆ. ಆ ಮದುವೆಗೆ ತಾವು ಕೂಡ ಬರುವುದಾಗಿ ದರ್ಶನ್ ಭರವಸೆ ನೀಡಿದ್ದಾರೆ ಎಂದು ತರುಣ್ ಹೇಳಿದ್ದಾರೆ.
ʻʻದರ್ಶನ್ ಅವರಿಗೆ ಸ್ವಲ್ಪ ಹುಷಾರಿಲ್ಲ. ರಿಕವರ್ ಆಗುತ್ತ ಇದ್ದಾರೆ. ನನ್ನ ನೋಡಿದಾಗ ಯಾವ ಸ್ಮೈಲ್ ಅಲ್ಲಿ ನೋಡುತ್ತಿದ್ದು ಅದೇ ನಗುವಿನಲ್ಲಿ ಇಂದು ನೋಡಿದರು. ಅವರಗಿಂತ ನಾವೇ ವೀಕ್ ಆಗಿದ್ದೇವೆ. ನನ್ನ ಮದುವೆ ಬಗ್ಗೆ ದರ್ಶನ್ ಅವರಿಗೆ ಮೊದಲೇ ಗೊತ್ತಿತ್ತು. ಈ ವಿಚಾರದಲ್ಲಿ ನನಗೆ ಮೊದಲಿನಿಂದಲೂ ತೊಳಲಾಟ ಇತ್ತು. ಯಾವುದೇ ಕಾರಣಕ್ಕೂ ಮದುವೆ ದಿನಾಂಕ ಬದಲಾಯಿಸಬೇಡ ಅಂತ ಅವರು ಹೇಳಿದ್ದಾರೆ. ನಾನು ಬಂದೇ ಬರ್ತೀನಿ ಎನ್ನುವ ನಂಬಿಕೆ ಅವರಲ್ಲಿ ಇದೆ. ಅವರು ಏನು ತಪ್ಪು ಮಾಡಿಲ್ಲ ಎನ್ನುವ ನಂಬಿಕೆ ನಮಗೂ ಇದೆ ಎಂದರು.
ದರ್ಶನ್ ಜೈಲು ಪಾಲಾದ ನಂತರ ಮೊದಲ ಬಾರಿಗೆ ತರುಣ್ ಸುಧೀರ್ ಭೇಟಿ ಮಾಡಿದ್ದಾರೆ. ತರುಣ್ ಸುಧೀರ್ ಲವ್ ಸ್ಟೋರಿ ಟ್ರ್ಯಾಕ್‌ಗೆ ತಂದಿದ್ದೆ ದರ್ಶನ್. ತರುಣ್ ಹಾಗೂ ನಟಿ ಸೋನಲ್ ಮದುವೆಗೆ ದರ್ಶನ್ ಮುದ್ರೆ ಒತ್ತಿದ್ದರು. ದರ್ಶನ್ ಇಲ್ಲದೆ ಮದುವೆಯನ್ನು ಮುಂದಕ್ಕೆ ಹಾಕಲು ತರುಣ್ ಸಜ್ಜಾಗಿದ್ದರು ಎನ್ನಲಾಗಿತ್ತು. ಹಿರಿಯರ ಸಲಹೆ ನಂತರ ತರುಣ್ ಮುದುವೆಗೆ ಮುಂದಾಗಿದ್ದಾರೆ. ಅಗಸ್ಟ್ 10,11ಕ್ಕೆ ತರುಣ್ ,ಸೋನಾಲ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ.
ರಾಬರ್ಟ್’ ಚಿತ್ರದಲ್ಲಿ ಸೋನಲ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಶೂಟಿಂಗ್ ಸಮಯದಲ್ಲೇ ತರುಣ್- ಸೋನಲ್ ನಡುವೆ ಪ್ರೀತಿ ಹುಟ್ಟಿತ್ತು ಎಂದು ಹೇಳಲಾಗುತ್ತಿದೆ. ಇನ್ನು ದರ್ಶನ್ ಕೂಡ ಆಗಾಗ ತರುಣ್‌ಗೆ ಮದುವೆ ಮಾಡಿಸಬೇಕು ಎನ್ನುತ್ತಿದ್ದರಂತೆ. ಹಾಗಾಗಿ ಶೂಟಿಂಗ್ ಸೆಟ್‌ನಲ್ಲಿ ತರುಣ್- ಸೋನಲ್ ಇಬ್ಬರನ್ನು ತಮಾಷೆಯಾಗಿ ರೇಗಿಸುತ್ತಿದ್ದರು, ಇದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿರಬಹುದು ಎನ್ನಲಾಗಿದೆ.