Trending

ಕೈತಪ್ಪಿದ ಟಿಕೆಟ್, ಬಂಡಾಯ ಅಭ್ಯರ್ಥಿಯಾಗಿ ಸಾದಿಕ್ ಪೈಲ್ವಾನ್ ಕಣಕ್ಕೆ : ಕಾಂಗ್ರೆಸ್​ಗೆ ಪಾಠ ಕಲಿಸೋದಾಗಿ ಶಪಥ

Spread the love

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್​ನಿಂದ ಟಿಕೆಟ್ ಘೋಷಣೆ ಆಗಿದೆ. ಟಿಕೆಟ್​ಗಾಗಿ ಒತ್ತಾಯಿಸಿದ್ದ ಅಲ್ಪಸಂಖ್ಯಾತರು ತಮ್ಮ ಪಟ್ಟು ಸಡಿಲಿಸದೆ ಶಾಮನೂರು ಕುಟುಂಬಕ್ಕೆ ಸಂಕಷ್ಟ ತಂದೊಡಿದ್ದಾರೆ. ಇದೀಗ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಸಾದಿಕ್ ಪೈಲ್ವಾನ್ ಅವರು ಘೋಷಣೆ ಮಾಡಿದ್ದಾರೆ.

ಹಳೇ ದಾವಣಗೆರೆಯ ಜೆ ಇಮಾಮ್ ನಗರದ ಅರಳಿ ಮರದ ವೃತ್ತದಿಂದ ಸೋಮವಾರ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸುವುದಾಗಿ ಸಾದಿಕ್ ಪೈಲ್ವಾನ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಶುಕ್ರವಾರದವರೆಗೆ ಬಿ ಫಾರಂ ಸಿಗುವ ಭರವಸೆ ಇತ್ತು. ಬಿ- ಫಾರಂ ಸಿಕ್ಕಿಲ್ಲ. ಕಾಂಗ್ರೆಸ್​ಗೆ ಈ ಬಾರಿ ದಾವಣಗೆರೆಯಲ್ಲಿ ಪಾಠ ಕಲಿಸುತ್ತೇವೆ. ಸಾವಿರಾರು ಜನರ ಬೆಂಬಲದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿ ನಾಮಪತ್ರ ಸಲ್ಲಿಕೆಗೆ ನಿರ್ಧಾರ ಮಾಡಿದ್ದೇನೆ.‌

40 ವರ್ಷಗಳಿಂದ ಕಾಂಗ್ರೆಸ್​ನಲ್ಲಿ ದುಡಿದಿದ್ದೇನೆ. ಆದ್ರೆ ಕಾಂಗ್ರೆಸ್​ನಿಂದ ಅನ್ಯಾಯ ಆಗಿದೆ. ಶಾಮನೂರು ಕುಟುಂಬದ ವಿರುದ್ಧ ಅಖಾಡಕ್ಕೆ ಇಳಿಯಲು ಸಿದ್ಧವಾಗಿದ್ದೇನೆ. ನಮ್ಮ ಹೋರಾಟ ಕಾಂಗ್ರೆಸ್ ಪಕ್ಷದ ವಿರುದ್ಧ, ಯಾವ ಪಕ್ಷದ ವಿರುದ್ಧವೂ ಅಲ್ಲ’ ಎಂದಿದ್ದಾರೆ.

ಕೊನೆಗೂ ಮುಸ್ಲಿಂರಿಗೆ ಟಿಕೆಟ್ ಕೈ ತಪ್ಪಿದೆ. ಸಚಿವ ಜಮೀರ್ ಅಹ್ಮದ್ ಅವರು ಮಾಡಿದ ಪ್ರಯತ್ನ ವಿಫಲ ಆಗಿದೆ. ಸಮರ್ಥ್ ಶಾಮನೂರು ಕಾಂಗ್ರೆಸ್ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆಯಾಗಿದೆ.‌ ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

‘ನಾವು ಟಿಕೆಟ್​ಗಾಗಿ ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಜಮೀರ್ ಅಹ್ಮದ್, ಸಲೀಂ ಅಹ್ಮದ್, ರಹಿಂ ಖಾನ್ ಅವರು ಟಿಕೆಟ್​ಗಾಗಿ ಸಾಕಷ್ಟು​ ಹೋರಾಟ ಮಾಡಿದ್ರು. ಆದ್ರೂ ಟಿಕೆಟ್ ನಮ್ಮ‌ ಕೈ ತಪ್ಪಿದೆ. ಏನ್ ಮಾಡ್ಬೇಕೆಂದು ನಿರ್ಧಾರ ಮಾಡಲಿದ್ದೇವೆ’ ಎಂದು ಹೇಳಿದರು.

[pj-news-ticker]