ಶಿರಾಳಕೊಪ್ಪ : ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ಗ್ರಾಮದಲ್ಲಿ ಮಹಿಳೆಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ದೊರತಿದ್ದು ಮಹಿಳೆಯನ್ನ ಅತ್ಯಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಮಹಿಳೆಯ ಮಕ್ಕಳು ಆರೋಪಿಸಿದ್ದಾರೆ.
ಮಾ.11 ರಂದು ಹಾಲೇಶ್ ನಾಯ್ಕ ಮತ್ತು ಹೇಮಂತ್ ನಾಯ್ಕ ಮಹಿಳೆಯನ್ನ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದಾಗಿ ಸಾವನ್ನಪ್ಪಿದ ಮಹಿಳೆಯ ಮಕ್ಕಳಾದ ಮಂಜುನಾಯ್ಕ್ ಎಫ್ಐಆರ್ ನಲ್ಲಿ ಆರೋಪಿಸಿದ್ದಾರೆ.
ಮಹಿಳೆಯ ಖಾಸಗಿ ಅಂಗಕ್ಕೆ ಕಚ್ಚಿದ ಗುರುತು ಕಂಡುಬಂದಿದ್ದು, ಹಾಲೇಶ್ ನಾಯ್ಕ ಮತ್ತು ಹೇಮಂತ್ ನಾಯ್ಕ್ ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯ ಜೇಮೀಬಾಯಿ (40) ಎಂದು ಗುರುತಿಸಲಾಗಿದೆ. ತಾಯಿಯನ್ನ ಹಾಲೇಶ ನಾಯ್ಕ ಅತ್ಯಾಚಾರ ನಡೆಸಿರುವುದನ್ನ ಮಗ ಮಂಜನಾಯ್ಕ್ ಕಣ್ಣಾರೆ ನೋಡಿದ್ದು ಇವರನ್ನ ಹಿಡಿಯಲು ಮುಂದಾದಾಗ ಹಾಲೇಶ್ ನಾಯ್ಕ್ ತಳ್ಳಿ ಪರಾರಿಯಾಗಿದ್ದನು. ಈತನ ಜೊತೆ ಜೀಮೀಬಾಯಿ ಸಹ ಓಡಿಹೋಗಿದ್ದಳು.
ಈ ಘಟನೆ ಮಾ.11 ನೇ ತಾರೀಖು ನಡೆದಿದ್ದು ಮಾ.12 ರಂದು ಜೀಮೀಬಾಯಿ ಚಿಕ್ಕಮಾಗಡಿಯಲ್ಲಿರುವ ತನ್ನ ಮನೆಯಿಂದ 200 ಮೀಟರ್ ದೂರದಲ್ಲಿರುವ ಪಾಳು ಬಿದ್ದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಹೇಮ್ಲಾನಾಯ್ಕ ಹಾಲೇಶ್ ನಾಯ್ಕನಿಗೆ ಸಾಥ್ ನೀಡಿದ್ದಾನೆ.
ಇಂದು ಮೃತ ಜೇಮೀಬಾಯಿಯ ಕುಟುಂಬ ಶಿವಮೊಗ್ಗದ ಎಸ್ಪಿ ಕಚೇರಿಗೆ ಬಂದು ಎಸ್ಪಿ ಮಿಥುನ್ ಕುಮಾರ್ ಗೆ ಮನವಿ ನೀಡಿದ್ದಾರೆ. ಆರೋಪಿಗಳು ಪಕ್ಷವೊಂದರ ನಾಯ್ಕರ ಜೊತೆ ಗುರುತಿಸಿಕೊಂಡಿದ್ದು ಘಟನೆ ನಡೆದು 19 ದಿನಗಳಾದರೂ ಪೊಲೀಸರು ಬಂಧಿಸಿಲ್ಲ. ಶಿರಾಳಕೊಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿ ಉದ್ದೇಶ ಪೂರಕವಾಗಿ ವಿಳಂಭಿಸುತ್ತಿದ್ದಾರೆ ಎಂದು ದೂರಿದೆ.
ಆದರೆ ಮನವಿ ಸ್ವೀಕರಿಸಿದ ಎಸ್ಪಿ ಮಿಥುನ್ ಕುಮಾರ್ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ. ತನಿಖಾಧಿಕಾರಿಯ ಮೇಲೆ ಯಾವ ಒತ್ತಡವೂ ಇಲ್ಲ. ಎಲ್ಲ ರೀತಿಯ ತನಿಖೆ ನಡೆಯಲಿದೆ ಎಂದಿದ್ದಾರೆ.