ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಅಪ್ರೂವರ್ ಆಗಿ ನಾನು ಎಲ್ಲ ಸಾಕ್ಷ್ಯಗಳನ್ನು ಹೇಳುತ್ತೇನೆ ಎಂದು ವಂಚಕ ಸುಕೇಶ್ ಚಂದ್ರಶೇಖರ್ ಹೇಳಿದ್ದಾನೆ.
ಈ ಸಂಬಂಧ ಸುಕೇಶ್ ಚಂದ್ರಶೇಖರ್ ಪತ್ರವೊಂದನ್ನು ಬರೆದಿದ್ದು, ‘ತಿಹಾರ್ ಕ್ಲಬ್ಗೆ ಸ್ವಾಗತ.. ನಿಮ್ಮ ಎಲ್ಲ ನಾಟಕ ಬಂದ್.. ಯಾವಾಗಲೂ ಸತ್ಯ ಗೆಲ್ಲುತ್ತದೆ. ಇದು ಹೊಸ ಭಾರತದ ಶಕ್ತಿ, ಕಾನೂನಿನ ಮುಂದೆ ಯಾರು ಮೇಲಲ್ಲ, ಎಂಬುದಕ್ಕೆ ಉತ್ತಮ ಉದಾಹರಣೆ. ಹಿಂದಿನದನ್ನು ಬಹಿರಂಗಪಡಿಸುತ್ತೇನೆ. ಅರವಿಂದ್ ಕೇಜ್ರಿವಾಲ್ ಕಳ್ಳ.. ಆತನ ನೈಜತೆಯನ್ನು ಪ್ರಪಂಚಕ್ಕೆ ತೋರಿಸುತ್ತೇನೆ ಎಂದು ಸುಕೇಶ್ ಪತ್ರ ಬರೆದಿದ್ದಾನೆ.
‘ನನ್ನ ಪ್ರೀತಿಯ ಅರವಿಂದ್ ಕೇಜ್ರಿವಾಲ್ ಜೀ, ತಿಹಾರ್ ಕ್ಲಬ್ಗೆ ಬಾಸ್ ಆಗಿರುವ ನಿಮ್ಮನ್ನು ಸ್ವಾಗತಿಸಲು ಒಂದು ಉತ್ತಮ ಅವಕಾಶವನ್ನು ನೀಡಿದ್ದೀರಾ, ಇಂದಿನಿಂದ ನಿಮ್ಮ ಎಲ್ಲ ನಾಟಕಗಳು ಅಂತ್ಯವಾಗಲಿದೆ. ಮುಂದಿನ ವಾರ ಮಾರ್ಚ್ 25ಕ್ಕೆ ನನ್ನ ಜನ್ಮದಿನ, ಆ ಸಂಭ್ರಮವನ್ನು ನೀವು ಹೆಚ್ಚಿಸಿದ್ದೀರಾ, ಏಕೆಂದರೆ ನನ್ನ ಜನ್ಮದಿನದಂದು ತಿಹಾರ್ಗೆ ಬಂದಿದ್ದೀರಾ, ಅದು ನನಗೆ ಖುಷಿ, ನನ್ನ ಸಂಭ್ರಮ ಡಬಲ್ ಆಗಿದೆ. ತಿಹಾರ್ ಕ್ಲಬ್ ನಡೆಸಲು ಮೂವರು ಸಹೋದರರು ಬಂದಿದ್ದಾರೆ.
ಮೊದಲನೇಯವರು ಬಿಗ್ಬಾಸ್ ಅರವಿಂದ್ ಕೇಜ್ರಿವಾಲ್, ಎರಡನೇಯದ್ದು ಸಿಇಒ ಮನೀಶ್ ಸಿಸೋಡಿಯಾ ಮೂರನೇಯದ್ದು, ಸಿಇಒ ಸತ್ಯೇಂದರ್ ಜೈನ್ ಎಂದು ಸುಕೇಶ್ ಲೇವಡಿ ಮಾಡಿದ್ದಾರೆ.ಅಂತೆಯೇ ಕೇಜ್ರಿವಾಲ್ ಮುಂದಿನ ದಿನಗಳಲ್ಲಿ ನಿಮ್ಮ ಎಲ್ಲ ಅಕ್ರಮ ಹೊರಬರಲಿದೆ. ಈಗಾಗಲೇ ದೆಹಲಿ ಬಡವರಿಂದ 10 ರೀತಿಯ ಹಗರಣ ಮಾಡಿದ್ದೀರಾ, ಇನ್ನು 4 ನಿಮ್ಮ ಹಗರಣಕ್ಕೆ ನಾನೇ ಸಾಕ್ಷಿ, ಆದರೆ ನಾನು ಅದನ್ನು ಇಲ್ಲಿ ತಿಳಿಸುವುದಿಲ್ಲ ಎಂದು ಹೇಳಿದ್ದಾರೆ.